ನ್ಯೂಸ್ ನಾಟೌಟ್: ಉರ್ಫಿ ಜಾವೇದ್ ತಮ್ಮ ವಿಚಿತ್ರ ಫ್ಯಾಷನ್ ಮತ್ತು ಬಟ್ಟೆಯಿಂದ ಸುದ್ದಿಯಾಗುತ್ತಿರುವ ಈಕೆ ಈಗ ತಮ್ಮ ಉಡುಪಿನ ಜೊತೆಗೆ ಕೂದಲನ್ನು ಬೋಳಿಸಿ ಸುದ್ದಿಯಾಗಿದ್ದಾರೆ. ಬೋಳು ನೋಟದಲ್ಲಿರುವ ತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ! ಆದರೆ ಉರ್ಫಿ ಜಾವೇದ್ ನಿಜವಾಗಿಯೂ ಬೋಳಿಸಿಕೊಂಡಿದ್ದಾರೆಯೇ ?
ಚಿತ್ರವನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಇದೆಲ್ಲಾ ಭ್ರಮೆ ಎಂಬುದು ತಿಳಿಯುತ್ತದೆ. ವಾಸ್ತವವಾಗಿ ಉರ್ಫಿ ಜಾವೇದ್ ಅವರ ಈ ಫೋಟೋವನ್ನು ಮಾರ್ಫ್ ಮಾಡಲಾಗಿದೆ ಎಂಬ ಚರ್ಚೆಗಳು ಜೋರಾಗಿವೆ. ಉರ್ಫಿ ಜಾವೇದ್ ಪ್ರಯೋಗ ವಿಫಲವಾಗಿದೆ. ಫಿಲ್ಟರ್ಗಳನ್ನು ಬಳಸಿಕೊಂಡು ಉರ್ಫಿ ಜಾವೇದ್ ಈ ವರ್ಚುವಲ್ ಬೋಳು ನೋಟವನ್ನು ನೀಡಿದ್ದಾರೆ. ಆದರೆ, ಇದು ಎಡಿಟ್ ಮಾಡಿದ ಫೋಟೋ ಮತ್ತು ಉರ್ಫಿ ಫಿಲ್ಟರ್ ಬಳಸಿದೆ ಎಂದು ಹೆಚ್ಚಿನ ಜನರು ಕಾಮೆಂಟ್ ಮಾಡಿದ್ದಾರೆ.