ನ್ಯೂಸ್ ನಾಟೌಟ್: ನ್ಯಾಯಾಧೀಶರೊಬ್ಬರ ಮನೆಯಿಂದ ಸಾಕು ನಾಯಿಯನ್ನು ಕದ್ದ ಪ್ರಕರಣ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. 12ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ಪೊಲೀಸರು ಪ್ರಾಣಿ ಕೌರ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದು, ನೆರೆ ಹೊರೆಯ ನಿವಾಸಿ ಡಂಪಿ ಅಹ್ಮದ್ ಕುಟುಂಬದವರೇ ತಮ್ಮ ಮನೆಯ ನಾಯಿಯನ್ನು ಕದ್ದೊಯ್ದಿದ್ದಾರೆ ಎಂದು ನ್ಯಾಯಾಧೀಶರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ ಎನ್ನಲಾಗಿದೆ. ಸದ್ಯ ನ್ಯಾಯಾಧೀಶರು ಹರ್ದೋಯಿ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಆದರೆ ಅವರ ಕುಟುಂಬ ಸದಸ್ಯರು ಬರೇಲಿಯ ಸನ್ಸಿಟಿ ಕಾಲೋನಿಯಲ್ಲಿ ವಾಸವಿದ್ದಾರೆ. ಮೇ 16ರ ರಾತ್ರಿ ಕ್ಷುಲ್ಲಕ ವಿಚಾರಕ್ಕೆ ಕೆಲ ಹೊತ್ತು ನ್ಯಾಯಾಧೀಶರ ಹಾಗೂ ನೆರೆಹೊರೆಯ ನಿವಾಸಿ ಡಂಪಿ ಅಹ್ಮದ್ ಕುಟುಂಬ ಸದಸ್ಯರ ನಡುವೆ ವಾಗ್ವಾದ ನಡೆದಿತ್ತು ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ. ಈ ವೇಳೆ ನ್ಯಾಯಾಧೀಶರ ನಿವಾಸದಲ್ಲಿದ್ದ ನಾಯಿಯು, ಡಂಪಿ ಅಹ್ಮದ್ ಕುಟುಂಬ ಸದಸ್ಯರ ಮೇಲೆ ದಾಳಿ ನಡೆಸಿತ್ತು. ಇದಾದ ನಂತರ, ಅದೇ ಕಾಲೊನಿಯಲ್ಲಿ ವಾಸವಿರುವ ಡಂಪಿ ಅಹ್ಮದ್ ಪುತ್ರ ಖಾದಿರ್ ಖಾನ್, ನ್ಯಾಯಾಧೀಶರ ಕುಟುಂಬದ ಸದಸ್ಯರ ಜತೆ ಜಗಳ ಕಾದಿದ್ದಲ್ಲದೇ, ಕೊ* ಲೆ ಮಾಡುವ ಬೆದ* ರಿಕೆ ಹಾಕಿದ್ದ ಎನ್ನಲಾಗಿದೆ.
ಮೇ 16ರ ರಾತ್ರಿ 9.45ರ ಸುಮಾರಿಗೆ ನ್ಯಾಯಾಧೀಶರ ಮನೆಗೆ ಬಂದಿದ್ದ ಡಂಪಿ ಅಹ್ಮದ್ನ ಪತ್ನಿ, ಅವರ ಜತೆ ಮಾತನಾಡಲು ಪಟ್ಟು ಹಿಡಿದಿದ್ದರು. ಅವರ ನಾಲ್ಕು ತಿಂಗಳ ನಾಯಿ ತಮ್ಮ ಮಗಳು ಹಾಗು ತಮ್ಮ ಮೇಲೆ ದಾಳಿ ನಡೆಸಿತ್ತು ಎಂಬ ಕಾರಣಕ್ಕೆ ನ್ಯಾಯಾಧೀಶರ ಕುಟುಂಬದ ವಿರುದ್ಧ ಕೋಪಗೊಂಡಿದ್ದರು ಎನ್ನಲಾಗಿದೆ. ಹಾಗಾಗಿ ಅವರೇ ನಾಯಿಯನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ನ್ಯಾಯಾದೀಶರು ಫೋನ್ ಮೂಲಕ ದೂರು ನೀಡಿದ್ದು, ನೆರೆಮನೆಯವರ ವಿರುದ್ಧ ದೂರು ದಾಖಲಿಸಿದ್ದರು. ನಾಯಿಯನ್ನು ಹುಡುಕಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ ಎನ್ನಲಾಗಿದೆ.
Click 👇