ನ್ಯೂಸ್ ನಾಟೌಟ್: ಇತ್ತೀಚೆಗೆ ಮಾಲಿವುಡ್ ನಲ್ಲಿ ಮಾತ್ರ ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಅದು ಬಿಟ್ಟರೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿಯಲ್ಲೂ ಕೈಲೆಕ್ಕದಷ್ಟು ಸಿನಿಮಾ ರಿಲೀಸ್ ಆಗುತ್ತಿವೆ. ಓಟಿಟಿ, ಪ್ಯಾನ್ ಇಂಡಿಯಾ ಬಂದ ಬಳಿಕ ಈಗೀಗ ಮೊದಲಿನ ಹಾಗೆ ಸ್ಟಾರ್ ನಟರ ಸಿನಿಮಾಗಳು ತಿಂಗಳಿಗೊಮ್ಮೆ ಅಥವಾ ವಾರದಲ್ಲಿ ಒಂದಾದರೂ ಬರುವುದಿಲ್ಲ. ಸ್ಟಾರ್ ನಟರು ಪ್ಯಾನ್ ಇಂಡಿಯಾ ರಿಲೀಸ್ ಗಾಗಿ ವರ್ಷದಲ್ಲಿ ಅಥವಾ ಎರಡು ವರ್ಷಕ್ಕೊಂದು ಸಿನಿಮಾಗಳನ್ನು ರಿಲೀಸ್ ಮಾಡುತ್ತಿದ್ದಾರೆ. ಆ ಸಿನಿಮಾಗಳು ರಿಲೀಸ್ ಆದ ವೇಳೆ ಹೆಚ್ಚಾಗಿ ಮಲ್ಟಿಫ್ಲೆಕ್ಸ್ ಗಳೇ ಹೌಸ್ ಫುಲ್ ಆಗುತ್ತದೆ ವಿನಃ ಸಿಂಗಲ್ ಸ್ಕ್ರೀನ್ ಗಳತ್ತ ಜನ ಬರುವುದೇ ಕಡಿಮೆ ಎಂಬುದು ಈಗಿನ ಸ್ಥಿತಿ.
ಇತ್ತೀಚೆಗೆ ಸಿಂಗಲ್ ಸ್ಕ್ರೀನ್ ಥಿಯೇಟರ್ ಗೆ ಪ್ರೇಕ್ಷಕರು ಬರುತ್ತಿಲ್ಲ. ಈ ಕಾರಣದಿಂದ ಅನೇಕ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳು ಕಳೆದ ಕೆಲ ವರ್ಷಗಳಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಕರ್ನಾಟಕ ಹಲವು ಥಿಯೇಟರ್ ಗಳು ಪ್ರೇಕ್ಷಕರ ಕೊರತೆಯಿಂದ ಬಂದ್ ಆಗಿವೆ. ಟಾಲಿವುಡ್ ಚಿತ್ರರಂಗದಲ್ಲೂ ಪ್ರೇಕ್ಷಕರ ಕೊರತೆ ಉಂಟಾಗಿದೆ. ಈ ಕಾರಣದಿಂದ ಥಿಯೇಟರ್ ಗಳು ಬಂದ್ ಆಗುವ ದಿನ ಬಂದಿದೆ. ತೆಲಂಗಾಣ ಸ್ಟೇಟ್ ಸಿಂಗಲ್ ಥಿಯೇಟರ್ ಅಸೋಸಿಯೇಷನ್ ಹತ್ತು ದಿನಗಳ ಕಾಲ ಕರ್ನಾಟಕದಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಮುಚ್ಚಲು ನಿರ್ಧರಿಸಿರುವುದಾಗಿ ವರದಿಯಾಗಿದೆ. ಕಳೆದ ಕೆಲ ವಾರಗಳಿಂದ ಟಾಲಿವುಡ್ ನಲ್ಲಿ ಯಾವ ಪ್ರಮುಖ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ರಿಲೀಸ್ ಆದರೂ ಅದಕ್ಕೆ ಪ್ರೇಕ್ಷಕರು ಬರುವುದು ಕಡಿಮೆಯಾಗಿದೆ.
ಪ್ರತಿ ವರ್ಷ ಏಪ್ರಿಲ್ – ಮೇ ತಿಂಗಳಿನಲ್ಲಿ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗುತ್ತಿತ್ತು. ಈ ಬಾರಿ ಐಪಿಎಲ್ ಹಾಗೂ ಎಲೆಕ್ಷನ್ ಜೊತೆಯಾಗಿ ಬಂದಿರುವುದರಿಂದ ಹತ್ತಾರು ಚಿತ್ರತಂಡಗಳು ಈ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿಲ್ಲ. ಮೇ.17 ರಿಂದ 25 ರವರೆಗೆ ಥಿಯೇಟರ್ ಗಳನ್ನು ಬಂದ್ ಮಾಡಲಾಗುತ್ತಿದೆ. ಮೇ.26 ರಂದು ಥಿಯೇಟರ್ ಓಪನ್ ಆಗಲಿದೆ. ತೆಲಂಗಾಣದಲ್ಲಿ ಸುಮಾರು 400 ಕ್ಕೂ ಅಧಿಕ ಥಿಯೇಟರ್ ಗಳಿವೆ. ಇದೇ ಶುಕ್ರವಾರ(ಮೇ.17 ರಿಂದ) ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳನ್ನು ಬಂದ್ ಮಾಡಲಾಗುತ್ತಿದೆ. ಸದ್ಯ ರಿಲೀಸ್ ಆಗಿರುವ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಬರುತ್ತಿಲ್ಲ ಹಾಗಾಗಿ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ. ಥಿಯೇಟರ್ ನಲ್ಲಿ ದುಡಿಯುವ ಕೆಲಸಗಾರರಿಗೆ ಸಂಬಳ, ಕರೆಂಟ್ ಬಿಲ್ ಗೆ ಸೇರಿದಂತೆ ಪ್ರತಿಯೊಂದಕ್ಕೂ ಹಣ ವ್ಯಯಿಸಬೇಕಿದೆ. ಇದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟವಾಗುತ್ತಿರುವುದರಿಂದ ಸಿಂಗಲ್ ಸ್ಕ್ರೀನ್ ಥಿಯೇಟರ್ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
Click 👇