ನ್ಯೂಸ್ ನಾಟೌಟ್: ಕಳೆದ ಕೆಲವು ತಿಂಗಳ ಹಿಂದೆ ಗೂಗಲ್ ಮ್ಯಾಪ್ ಬಳಸಿ ಸಂಚರಿಸುತ್ತಿದ್ದ ಕಾರೊಂದು ಸಮುದ್ರಕ್ಕೆ ಬಿದ್ದ ಘಟನೆ ಮಾಸುವ ಮುನ್ನವೇ ಇಂಥದೊಂದು ಘಟನೆ ಕೇರಳದ ಕೊಟ್ಟಾಯಂನ ಕುರುಪಂತರ ಎಂಬಲ್ಲಿ ಶನಿವಾರ ಮುಂಜಾನೆ 3 ಗಂಟೆ ವೇಳೆಗೆ ನಡೆದಿದೆ.
ಹೈದರಾಬಾದ್ ಮೂಲದ ನಾಲ್ವರು ಪ್ರವಾಸಿಗರಿದ್ದ ಕಾರು ರಜೆಯ ಮಜಾ ಸವಿಯಲು ಮುನ್ನಾರ್ಗೆ ತೆರಳಿತ್ತು. ಅಲ್ಲಿಂದ ಅಲಪ್ಪುಜಗೆ ಮಾರ್ಗ ಗೊತ್ತಾಗದ ಕಾರಣ ಗೂಗಲ್ ಮ್ಯಾಪ್ ಅವಲಂಬಿಸಿದ್ದರು. ಆದರೆ ಧಾರಾಕಾರ ಮಳೆಯಿಂದ ಚಾಲಕನಿಗೆ ದಾರಿ ತಪ್ಪಿದ್ದು,ನೀರು ನಿಂತ ರಸ್ತೆ ಭಾವಿಸಿ ಕಾಲುವೆಗೆ ಸಾಗಿತ್ತು.
ಮಳೆಯಿಂದಾಗಿ ಕಾಲುವೆಯನ್ನು ರಸ್ತೆ ಎಂದು ನಂಬಿದ್ದ ಚಾಲಕನಿಗೆ 150 ಮೀಟರ್ ದೂರ ಚಲಿಸಿದಾಗಲೇ ಗೊತ್ತಾಗಿದ್ದು, ಇದು ರಸ್ತೆಯಲ್ಲ ಕಾಲುವೆ ಎಂದು..! ಬಳಿಕ ಕಾರಿನ ಬೂಟ್ಸ್ಪೇಸ್ ಮೂಲಕ ಹೊರಬಂದಿದ್ದಾರೆ. ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.