ನ್ಯೂಸ್ ನಾಟೌಟ್: ಬಿಜೆಪಿಗೆ ವೋಟ್ ಹಾಕಬೇಡ ಎಂದು ಇವರಿಗೆ ಯಾರ ಪರ್ಮಿಷನ್ ಕೊಟ್ಟಿದ್ದಾರೆ. ಕಳ್ಳ ಸ್ವಾಮಿ ಮಾತು ಕೇಳಬೇಡಿ, ಎಸಿ ರೂಂ ಸ್ವಾಮೀಜಿ ನಮಗೆ ಬೇಕಾಗಿಲ್ಲ ಎಂದು ಹೇಳುವ ಮೂಲಕ ಹರಿಹರ ವಚನಾನಂದ ಸ್ವಾಮೀಜಿ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.
ಎ.1 ರಂದು ದಾವಣಗೆರೆಯಲ್ಲಿ ನಡೆದ ಪಂಚಮಸಾಲಿ ಸಮಾಜದ ಸಭೆಯಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಿನ್ನ ಬಾಯಿ ಸರಿ ಇದ್ದರೆ ನೀನೆ ಮುಖ್ಯಮಂತ್ರಿ ಆಗ್ತಿದ್ದೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ಹೇಳ್ತಾ ಇದ್ರು. ನಾನು ಆಸ್ತಿ ಮಾಡಿಲ್ಲ, ಐಟಿ, ಇಡಿ ರೇಡ್ ಮಾಡಿದರೆ ಏನೂ ಸಿಗಲ್ಲ. ಇಡೀ ರಾಜ್ಯದಲ್ಲಿ ಮೂರು ಕುಟುಂಬಗಳು ವೀರಶೈವ ಲಿಂಗಾಯತ ಕಪಿಮುಷ್ಠಿಯಲ್ಲಿದೆ. ಇವ್ರು ಎಲ್ಲಾದರು ಹಾಸ್ಟೇಲ್ ಕಟ್ಟಿದ್ದಾರಾ?. ಎಲ್ಲಾ ರಾಜಕೀಯ ಪಕ್ಷದವರು ಪಂಚಮಸಾಲಿ ಸಮಾಜವನ್ನ ತುಳಿದಿದ್ದಾರೆ ಎಂದು ದೂರಿದ್ದಾರೆ.
ನನ್ನನ್ನ ಹೊರಗೆ ಹಾಕುವ ಶಕ್ತಿ ಯಾರಿಗೂ ಇಲ್ಲ. ಎರಡು ವರ್ಷದ ಹಿಂದೇನೆ ಹೋರ ಹಾಕ್ತಾ ಇದ್ರು. ನನ್ನ ಹಿಂದೆ ಹಿಂದೂ ಸಮಾಜ, ಪಂಚಮಸಾಲಿ ಸಮಾಜ ಇದೆ. ಪಂಚಮಸಾಲಿ ಸಮಾಜಕ್ಕೆ 2d ಸಿಕ್ಕಿದೆ. ದೆಹಲಿಗೆ ಅಮಿತ್ ಶಾ ಕರೆಸಿ ಮೀಸಲಾತಿ ಬಗ್ಗೆ ಮಾತನಾಡಿದ್ರು. ಪ್ರಧಾನಿ ಡಿಕ್ಲೇರ್ ಮಾಡಿದ್ದಾರೆ ಧರ್ಮಾದಾರಿತ ಮೀಸಲಾತಿ ಕೊಡಲು ಬರಲ್ಲ. ದಲಿತ ಹಿಂದುಳಿದವರ ಮೀಸಲಾತಿ ಕಿತ್ತು ಮುಸ್ಲಿಂಗೆ ಮೀಸಲಾತಿ ಕೊಡ್ತಿದ್ದಾರೆ ಎಂದು ಸಿದ್ದರಾಯ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.