ನ್ಯೂಸ್ ನಾಟೌಟ್: ಏರ್ ಟೆಲ್ ಮೊಬೈಲ್ ರೀಚಾರ್ಜ್ ಗೆಂದು ಶಾಪ್ ಗೆ ಬಂದ ಹಿಂದೂ ಯುವತಿಯ ಫೋಟೋ ಕ್ಲಿಕ್ಕಿಸಿ ಪೊಲೀಸರ ಅತಿಥಿಯಾದ ಮುಸ್ಲಿಂ ಯುವಕನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿಂದೂ ಜಾಗರಣಾ ವೇದಿಕೆ ಮಹತ್ವದ ಹೇಳಿಕೆ ಪ್ರಕಟಿಸಿದೆ. ಸುಳ್ಯದಲ್ಲಿ ಮುಂದೆ ಇಂತಹ ಘಟನೆಗಳು ಸಂಭವಿಸಿದ್ದಲ್ಲಿ ಆಗುವ ಅನಾಹುತಗಳಿಗೆ ಸಂಬಂಧಪಟ್ಟವರೇ ಹೊಣೆ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಹಿಂದೂ ಜಾಗರಣಾ ವೇದಿಕೆ, ‘ಸುಳ್ಯದ ಅನೇಕ ಮೊಬೈಲ್ ಅಂಗಡಿಗಳಲ್ಲಿ ಈ ರೀತಿಯಾದಂತಹ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇನ್ನು ಮುಂದೆ ಇಂತಹ ಘಟನೆಗಳು ನಡೆದದ್ದೇ ಆದರೆ ಆಗುವ ಅನಾಹುತಗಳಿಗೆ ಮೊಬೈಲ್ ಅಂಗಡಿಯವರೇ ಕಾರಣವಾಗಿರುತ್ತಾರೆ. ತಪ್ಪಿತಸ್ಥ ಆರೋಪಿ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಮಾತ್ರವಲ್ಲ ಅನ್ಯಧರ್ಮದವರೊಂದಿಗೆ ವ್ಯಾಪಾರ ವ್ಯವಹಾರ ನಡೆಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ.