ನ್ಯೂಸ್ ನಾಟೌಟ್: 2023-24 ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಮೇ.9ಕ್ಕೆ ಪ್ರಕಟವಾಗಿದ್ದು, ಒಟ್ಟು 8,59,967 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಅವರಲ್ಲಿ 6,31,204 ತೇರ್ಗಡೆಯಾದ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಬಾರಿಯ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಉಡುಪಿ ಪ್ರಥಮ ಸ್ಥಾನ ಪಡೆದುಕೊಂಡರೆ, ಯಾದಗಿರಿ ಕೊನೆಯ ಸ್ಥಾನದಲ್ಲಿದೆ.
ಬಾಲಕರು: 2,87,416(65.90%)
ಬಾಲಕಿಯರು-3,43,788(81.11%) ಈ ವರ್ಷ SSLC ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ರಾಜ್ಯದಲ್ಲಿ ಶೇಕಡಾವಾರು ಪ್ರಥಮ ಸ್ಥಾನ ಪಡೆದ ಜಿಲ್ಲೆ :- 1)ಉಡುಪಿ ಪ್ರಥಮ ಸ್ಥಾನ(94%) 2), ದಕ್ಷಿಣ ಕನ್ನಡ :ದ್ವೀತಿಯ ಸ್ಥಾನ(92.12%) 3) ,ಶಿವಮೊಗ್ಗ (88.67%), ಯಾದಗಿರಿ 50.59% ಪಡೆದು ಕೊನೆಯ ಸ್ಥಾನದಲ್ಲಿದೆ.