ನ್ಯೂಸ್ ನಾಟೌಟ್: ಸಂಗೀತ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನ ಖ್ಯಾತ ಗಾಯಕಿ ಮೇಲೆ ಅಭಿಮಾನಿಯೊಬ್ಬ ಬಾಟಲಿ ಎಸೆದ ಘಟನೆ ಡೆಹ್ರಾಡೋನ್ ನಲ್ಲಿ ನಡೆದಿದೆ. ಸುನಿಧಿ ಚೌಹಾಣ್ ಬಿಟೌನ್ ಖ್ಯಾತ ಗಾಯಕಿಯರಲ್ಲಿ ಒಬ್ಬರು. ಇತ್ತೀಚಿನ ದಿನಗಳಲ್ಲಿ ಅನೇಕ ಮ್ಯೂಸಿಕ್ ಕಾನ್ಸಾರ್ಟ್ ಗಳನ್ನು ನೀಡುತ್ತಿದ್ದಾರೆ. ಅವರ ಕಾರ್ಯಕ್ರಮ ನೋಡಲು ಅಪಾರ ಮಂದಿ ಬರುತ್ತಾರೆ. ಡೆಹ್ರಾಡೋನ್ ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸುನಿಧಿ ಹಾಡುತ್ತಿದ್ದಾಗ ಅವರತ್ತ ಅಭಿಮಾನಿಯೊಬ್ಬ ಪ್ಲ್ಯಾಸ್ಟಿಕ್ ಬಾಟಲಿಯನ್ನು ಎಸೆದಿದ್ದಾನೆ.
ಆದರೆ ಇದರಿಂದ ವಿಚಲಿತರಾಗದ ಸುನಿಧಿ, “ಬಾಟಲಿಗಳನ್ನು ಎಸೆಯುವುದರಿಂದ ಏನಾಗುತ್ತದೆ? ಏನೂ ಇಲ್ಲ. ಇದು ಶೋಗೆ ಅಡ್ಡಿ ಆಗುತ್ತದೆ. ನಿಮಗೆ ಅದು ಬೇಕೇ?” ಎಂದು ಕೇಳಿದ್ದಾರೆ. ಇದಕ್ಕೆ ಎಲ್ಲರೂ ಒಟ್ಟಾಗಿ ಒಂದೇ ಧ್ವನಿಯಲ್ಲಿ “ಇಲ್ಲ” ಎಂದು ಹೇಳಿದ್ದಾರೆ. ಕಾರ್ಯಕ್ರಮದ ಬಳಿ ಸುನಿಧಿ ಕಾನ್ಸಾರ್ಟ್ ಹಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ‘ಶೀಲಾ ಕಿ ಜವಾನಿ’, ‘ಕಮ್ಲಿ’, ‘ಕ್ರೇಜಿ ಕಿಯಾ ರೇ’, ‘ಆಜಾ ನಾಚ್ಲೆ’, ‘ಬೀಡಿ, ‘ದೇಸಿ ಗರ್ಲ್’, ‘ಧೂಮ್ ಮಚಾಲೆ’, ಹೀಗೆ ಹತ್ತಾರು ಸೂಪರ್ ಹಿಟ್ ಹಾಡುಗಳಿಗೆ ಸುನಿಧಿ ಧ್ವನಿಯಾಗಿದ್ದರು.