ನ್ಯೂಸ್ ನಾಟೌಟ್: ಪೊಲೀಸ್ ಅಧಿಕಾರಿಯೇ ಕಟ್ಟಿಕೊಂಡ ಹೆಂಡತಿಗೆ ಅನ್ಯಾಯ ಮಾಡಿದ ಘಟನೆ ತೆಲಂಗಾನದಲ್ಲಿ ವರದಿಯಾಗಿದ್ದು, ನ್ಯಾಯ ಒದಗಿಸುವಂತೆ ಪತ್ನಿ ಠಾಣೆ ಎದುರೇ ಧರಣಿ ಮಾಡಿದ್ದಾಳೆ. ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಕೊಮುರವಳ್ಳಿ ಪೊಲೀಸ್ ಠಾಣೆಯ ಎದುರು ಸಬ್ ಇನ್ಸ್ಪೆಕ್ಟರ್ ಪತ್ನಿ ಧರಣಿ ಕುಳಿತು ಪತಿಯ ವಿರುದ್ಧ ಪ್ರತಿಭಟಿಸಿದ್ದಾರೆ.
ಕರೀಂ ನಗರ ನಿವಾಸಿಯಾಗಿರುವ ಎಸ್ಐ ನಾಗರಾಜು ವಿರುದ್ಧ ಆತನ ಪತ್ನಿ ಮಾನಸ ಠಾಣೆಗೆ ದೂರು ನೀಡಿದ್ದು, ನ್ಯಾಯ ಸಿಗುವವರೆಗೆ ಠಾಣೆ ಎದುರೇ ಧರಣಿ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೇ ಅಹೋರಾತ್ರಿ ರಾಣೆ ಎದುರು ಧರಣಿ ನಡೆಸಿದ ಮಾನಸ ರಾಜ್ಯದ ಗಮನ ಸೆಳೆದಿದ್ದಾಳೆ. ಎರಡು ವರ್ಷಗಳಿಂದ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿಲ್ಲ ಎಂದು ಗಂಡನ ವಿರುದ್ಧ ಆರೋಪ ಮಾಡಿರುವ ಮಾನಸ, ನನ್ನಿಬ್ಬರು ಮಕ್ಕಳಿಂದಲೂ ನನ್ನನ್ನು ದೂರವಿಟ್ಟಿದ್ದಾರೆ ಎಂದಿದ್ದಾಳೆ.
ಸಾಲದೆನ್ನುವಂತೆ ನಾಗರಾಜ್ ಬೇರೊಬ್ಬ ಮಹಿಳೆಯನ್ನೂ ಮದುವೆ ಆಗಿದ್ದಾರೆ ಎಂದು ಗಂಡನ ವಿರುದ್ಧ ಮಾನಸ ಆರೋಪ ಮಾಡಿದ್ದು, ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದರೂ ನಿರ್ಲಕ್ಷಿಸಲಾಗುತ್ತಿದೆ ಎಂದು ಠಾಣೆಯ ಮುಂದೆಯೇ ಆಕ್ರೋಶ ವ್ಯಕ್ತಪಡಿಸಿದರು. ಆತನ ಪತ್ನಿ ದೌರ್ಜನ್ಯ ಆರೋಪ ಮಾಡಿದ್ದು, ಅಪರಿಚಿತರನ್ನು ತಂದೆ, ತಾಯಿ ಎಂದು ಪರಿಚಯಿಸಿ 2021ರಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಮದುವೆಯಾದ ನಂತರ ಪಿಎಸ್ಐ ತಂದೆ ತನ್ನ ಮೇಲೆ ಹಲ್ಲೆ ನಡೆಸಿದ್ದು, ಮಾಂಗಲ್ಯ ಕಿತ್ತು ಹಾಕಿ ದೌರ್ಜನ್ಯ ಎಸಗಿದ್ದಾರೆ ಎಂದು ನೊಂದ ಮಹಿಳೆ ಆರೋಪ ಮಾಡಿದ್ದಾರೆ. ಇವಿಷ್ಟೇ ಅಲ್ಲದೇ, ಜ್ವರ ಬಂದಾಗ ಯಾವುದೋ ಟ್ಯಾಬ್ಲೇಟ್ ನೀಡಿ ಮನೆಯಲ್ಲಿ ಬಲವಂತವಾಗಿ ಕೂಡಿ ಹಾಕಿ ಗರ್ಭಪಾತ ಮಾಡಿಸಿದ್ದಾರೆ’ ಎಂದು ಆರೋಪ ಮಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
Click 👇