ನ್ಯೂಸ್ ನಾಟೌಟ್: ಶಾಲೆಯ ಮಹಿಳಾ ಪ್ರಾಂಶುಪಾಲರೊಬ್ಬರು ತಡವಾಗಿ ಬಂದಿದ್ದಕ್ಕೆ ಶಿಕ್ಷಕಿಗೆ ಥಳಿಸಿದ ಘಟನೆ ಆಗ್ರಾದಲ್ಲಿ ಎ.೪ ರಂದು ವರದಿಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸಾಮಾನ್ಯವಾಗಿ ಶಾಲೆಗೆ ತಡವಾಗಿ ಬಂದರೆ ಶಿಕ್ಷಕರು ಮಕ್ಕಳನ್ನು ಥಳಿಸುವುದನ್ನು ನಾವು ಕೇಳಿದ್ದೇವೆ. ಆದರೆ ವೈರಲ್ ವಿಡಿಯೋದಲ್ಲಿ ತಡವಾಗಿ ಬಂದಿದ್ದಕ್ಕಾಗಿ ಶಿಕ್ಷಕಿಗೆ ಪ್ರಾಂಶುಪಾಲರು ಥಳಿಸಿದ್ದಾರೆ.
ಆಗ್ರಾದ ಸೀಗಾನಾ ಗ್ರಾಮದ ಮಾಧ್ಯಮಿಕ ಶಾಲೆಯ ಮಾಜಿ ಪ್ರಾಂಶುಪಾಲರೊಬ್ಬರು ಶಿಕ್ಷಕಿ ಗುಂಜನ್ ಚೌಧರಿ ಮೇಲೆ ಹ*ಲ್ಲೆ ನಡೆಸಿದ್ದಾರೆ. ಅಲ್ಲದೆ ಆಕೆಯ ಬಟ್ಟೆಯನ್ನು ಹರಿದು ಹಾಕಲು ಯತ್ನಿಸಿದ್ದಾರೆನ್ನುವ ಆರೋಪದ ವಿಡಿಯೋ ವೈರಲ್ ಆಗಿದೆ. ಪ್ರಾಂಶುಪಾಲರ ಚಾಲಕ ಮೊದಲು ಇಬ್ಬರನ್ನು ಬೇರ್ಪಡಿಸಲು ಯತ್ನಿಸಿದ್ದು, ಬಳಿಕ ಶಿಕ್ಷಕರ ಮೇಲೆ ಹ* ಲ್ಲೆ ನಡೆಸಿರುವುದು ಕಂಡು ಬಂದಿದೆ. ಈ ದೃಶ್ಯವನ್ನು ಮಹಿಳೆಯೊಬ್ಬರು ತಮ್ಮ ಫೋನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇದನ್ನು ರೆಕಾರ್ಡ್ ಮಾಡಲಾಗುತ್ತಿದೆ ಎಂದು ವಿಡಿಯೋದಲ್ಲಿ ಹೇಳುತ್ತಿರುವುದು ಕೇಳಿ ಬಂದಿದೆ.
ಪ್ರಾಂಶುಪಾಲರು ಹಾಗೂ ಶಿಕ್ಷಕರು ತಮ್ಮ ಜಗಳದ ವೇಳೆ ವೃತ್ತಿಗೆ ಸೂಕ್ತವಲ್ಲದ ಅವಾಚ್ಯ ಶಬ್ದಗಳಿಂದ ಪರಸ್ಪರ ನಿಂದಿಸಿದ್ದಾರೆ. ಹಲ್ಲೆಯ ಸಂಪೂರ್ಣ ಘಟನೆಯ ನಂತರ ಶಾಲೆಯ ಪ್ರಾಂಶುಪಾಲರು ಶಿಕ್ಷಕಿಯ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.