ನ್ಯೂಸ್ ನಾಟೌಟ್: ಮರಳು ಮಾಫಿಯಾ ದಂಧೆಯಲ್ಲಿ ತೊಡಗಿರುವವರು ದಂಧೆಗೆ ಅಡ್ಡ ಬಂದ ಎಎಸ್ ಐ ಅನ್ನು ಟ್ರಾಕ್ಟರ್ ಹರಿಸಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಶಹದೋಲ್ ಬಳಿ ಶನಿವಾರ(ಎ.೪) ರಾತ್ರಿ ನಡೆದಿದೆ. ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲು ಪೊಲೀಸ್ ತಂಡ ಗ್ರಾಮಕ್ಕೆ ಆಗಮಿಸಿದ ನಂತರ ಟ್ರಾಕ್ಟರ್ ಹರಿಸಿ ಎಎಸ್ಐ ಹತ್ಯೆ ಮಾಡಲಾಗಿದೆ.
ಶಹದೋಲ್ನ ನೌಧಿಯಾದಲ್ಲಿ ಈ ಘಟನೆ ನಡೆದಿದ್ದು, ಟ್ರ್ಯಾಕ್ಟರ್ ಚಾಲಕನನ್ನು ಬಂಧಿಸಲಾಗಿದೆ. ಎಎಸ್ಐ ಮಹೇಂದ್ರ ಬಗ್ರಿ ಮತ್ತು ಅವರ ತಂಡವು ವಾರಂಟ್ನೊಂದಿಗೆ ಆರೋಪಿಯನ್ನು ಬಂಧಿಸಲು ಹೋಗಿದ್ದಾಗ ಎಎಸ್ ಐ ಹತ್ಯೆ ಮಾಡಲಾಗಿದೆ. ಟ್ರ್ಯಾಕ್ಟರ್ ಚಾಲಕನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸಾಗರ್ ತಿಳಿಸಿದ್ದಾರೆ. ವಿಚಾರಣೆ ವೇಳೆ ಟ್ರ್ಯಾಕ್ಟರ್ ಮಾಲೀಕನ ಮಗನೂ ಇದರಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ..ಐಪಿಸಿ ಸೆಕ್ಷನ್ 302/34, 414, 379 ಹಾಗೂ ಗಣಿಗಾರಿಕೆಗೆ ಸಂಬಂಧಿಸಿದ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.