- +91 73497 60202
- [email protected]
- November 22, 2024 4:03 PM
ರಾತ್ರಿ ಕರಾವಳಿಗೆ ಅಪ್ಪಳಿಸಿದ ‘ರೆಮಲ್’ ಚಂಡಮಾರುತ..! 1 ಲಕ್ಷ ಮಂದಿಯ ಸ್ಥಳಾಂತರ
ನ್ಯೂಸ್ ನಾಟೌಟ್: ರೆಮಲ್ ಚಂಡಮಾರುತ ನಿನ್ನೆ ರಾತ್ರಿ(ಮೇ.26) ಭಾನುವಾರ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿಯ ನಡುವೆ ಅಪ್ಪಳಿಸಿದ್ದು ತೀವ್ರ ಬಿರುಗಾಳಿಯಿಂದ ಭೂಕುಸಿತ ಉಂಟಾಗಿದೆ, ಗಾಳಿಯ ವೇಗ ಗಂಟೆಗೆ 110-135 ಕಿಮೀ ವೇಗ ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ರೆಮಲ್ ಚಂಡಮಾರುತದ ಪರಿಣಾಮ ಪಶ್ಚಿಮ ಬಂಗಾಳದ ದಕ್ಷಿಣ ಮತ್ತು ಉತ್ತರ 24 ಪರಗಣಗಳು, ಪುರ್ಬಾ ಮೇದಿನಿಪುರ್, ಕೋಲ್ಕತ್ತಾ ಹೌರಾ ಮತ್ತು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಗಳಲ್ಲಿ ಭಾರೀ ಮಳೆಯನ್ನು ತರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇಂದು ನಾಳೆ ಅರಬ್ಬಿ ಸಮುದ್ರದ ಕರಾವಳಿ ಪ್ರದೇಶಗಳಲ್ಲೂ ಸಮುದ್ರ ಪ್ರಕ್ಷುಬ್ಧಗೊಳ್ಳುವ ಸಾಧ್ಯತೆಗಳಿದ್ದು, ಮೀನುಗಾರರಿಗೆ ನಾಳೆಯವರೆಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಾಗರ ದ್ವೀಪ, ಸುಂದರ್‌ಬನ್ಸ್ ಮತ್ತು ಕಾಕದ್ವೀಪ್ ಸೇರಿದಂತೆ ಕರಾವಳಿ ಪ್ರದೇಶಗಳಿಂದ ಸುಮಾರು 1.10 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಕೋಲ್ಕತ್ತಾ ವಿಮಾನ ನಿಲ್ದಾಣವು ನಿನ್ನೆ ಭಾನುವಾರ ಮಧ್ಯಾಹ್ನದಿಂದ 21 ಗಂಟೆಗಳ ಕಾಲ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಎಂದು ವರದಿ ತಿಳಿಸಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ