ನ್ಯೂಸ್ ನಾಟೌಟ್: ಗುಜರಾತ್ ರಾಜ್ ಕೋಟ್ ನಲ್ಲಿನ ಗೇಮಿಂಗ್ ಜೋನ್ ಒಂದರಲ್ಲಿ ನಡೆದ ಬೆಂಕಿ ಅವಘಡದಲ್ಲಿ ಸಾವಿಗೀಡಾದವರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿದ್ದು, ಈ ವರೆಗೆ ಮಕ್ಕಳು, ಮಹಿಳೆಯರು ಸೇರಿದಂತೆ ಇದುವರೆಗೆ 34 ಮಂದಿ ಮೃತಪಟ್ಟಿದ್ದಾರೆ. ಈ ಅವಘಡದಲ್ಲಿ ನವದಂಪತಿಗಳು ಕೂಡ ಸಾವಿಗೀಡಾಗಿದ್ದಾರೆ. ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡಕ್ಕೆ ತನಿಖೆಯನ್ನು ವಹಿಸಿದೆ. ಬೆಂಕಿ ಅವಘಡಕ್ಕೀಡಾದ ರಾಜಕೋಟ್ನ ಟಿಆರ್ಪಿ ಗೇಮಿಂಗ್ ಜೋನ್ಗೆ ಪರವಾನಿಗೆ ಹಾಗೂ ಎನ್ಒಸಿ ಕೂಡ ಇರಲಿಲ್ಲ.
99 ರೂ. ಟಿಕೆಟ್ ರಿಯಾಯಿತಿ ನೀಡಿದ್ದರಿಂದ ಹೆಚ್ಚಿನ ಜನರು ಕೂಡ ಬಂದಿದ್ದರು. ಈ ಸಂಬಂಧ ಗೇಮಿಂಗ್ ಜೋನ್ 6 ಪಾಲುದಾರರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಅಕ್ಷಯ್ ಧೋಲಾರಿಯಾ -ಖ್ಯಾತಿ ಸ್ವಾಲಿವಿಯಾ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ಅಕ್ಷಯ್ ಕೆನಾಡದಲ್ಲಿ ವ್ಯಾಸಂಗ ಮಾಡುತ್ತಿದ್ದು, ಮದುವೆಯಾಗಲು ಭಾರತಕ್ಕೆ ಬಂದಿದ್ದರು.
ಕಳೆದ ವಾರ ಅಷ್ಟೇ ಇಬ್ಬರು ಕೋರ್ಟಿನಲ್ಲಿ ರಿಜಿಸ್ಟಾರ್ ಮ್ಯಾರೇಜ್ ಆಗಿದ್ದರು. ಅಕ್ಷಯ್ – ಖ್ಯಾತಿ ಸ್ವಾಲಿವಿಯಾ ಶನಿವಾರ(ಮೇ.25) ಸಂಜೆ ಗೇಮಿಂಗ್ ಜೋನ್ಗೆ ಬಂದಿದ್ದರು. ಇವರೊಂದಿಗೆ ಸಂಬಂಧಿ ಕೂಡ ಬಂದಿದ್ದರು. ದಂಪತಿ ಈ ವರ್ಷದ ಡಿಸೆಂಬರ್ನಲ್ಲಿ ಹಿಂದೂ ಸಂಪ್ರದಾಯಗಳ ಪ್ರಕಾರ ಕುಟುಂಬಗಳ ಸಮ್ಮುಖದಲ್ಲಿ ಮದುವೆ ಆಗುವ ಯೋಜನೆಯನ್ನು ಹಾಕಿಕೊಂಡಿದ್ದರು. ಘಟನೆಯ ನಂತರ ಯುಎಸ್ ನಲ್ಲಿ ವಾಸಿಸುವ ಅಕ್ಷಯ್ ಪೋಷಕರು ರಾಜ್ ಕೋಟ್ ಗೆ ತೆರಳಿ ಪೊಲೀಸರು ಹೇಳಿದಂತೆ ಗುರುತನ್ನು ಖಚಿತಪಡಿಸಿಕೊಳ್ಳಲು ಡಿಎನ್ಎ ಮಾದರಿಗಳನ್ನು ಕೊಟ್ಟಿದ್ದಾರೆ. ಅಕ್ಷಯ್ , ಖ್ಯಾತಿ ಹಾಗೂ ಅಕ್ಷಯ್ ಅವರ ಸಂಬಂಧಿ ಬೆಂಕಿ ಅವಘಡದಲ್ಲಿ ಸುಟ್ಟು ಕರಕಲಾಗಿದ್ದಾರೆ.
Click 👇