ನ್ಯೂಸ್ ನಾಟೌಟ್: ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ವಿಷಯ ಡಿಸಿಎಂ ಡಿಕೆ ಶಿವಕುಮಾರ್ ಗೆ ಮೊದಲೇ ಗೊತ್ತಿತ್ತಾ ಎಂಬ ಚರ್ಚೆಗಳು ಜೋರಾಗಿವೆ. ಇದೀಗ ಎಂಎಲ್ಸಿ ಸೂರಜ್ ರೇವಣ್ಣ ಜನವರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ನ್ನು ಭೇಟಿಯಾಗಿ ಸೋದರನ ವಿಡಿಯೋ ಸಂಬಂಧ ಚರ್ಚೆ ನಡೆಸಿದ್ದರು ಎನ್ನಲಾಗಿದೆ. ಉಪಮುಖ್ಯಮಂತ್ರಿಗಳನ್ನು ಸೂರಜ್ ರೇವಣ್ಣ ಭೇಟಿಯಾದ ವೇಳೆ ಕ್ಲಿಕ್ಕಿಸಿದ್ದು ಎನ್ನಲಾದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಹಲವು ಅನುಮಾನಗಳು ಮೂಡಿವೆ.
ಪ್ರಜ್ವಲ್ ರೇವಣ್ಣ ದ್ದು ಎನ್ನಲಾದ ಅಶ್ಲೀಲ ವಿಡಿಯೋ ಡಿಕೆ ಶಿವಕುಮಾರ್ ಕೈ ಸೇರಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ರೇವಣ್ಣ ಕುಟುಂಬದ ಪರವಾಗಿ ಸೂರಜ್ ಭೇಟಿಯಾಗಿ ಚರ್ಚೆ ನಡೆಸಿದ್ದರು ಎನ್ನಲಾಗಿದೆ. ಈ ವೇಳೆ ವಿಡಿಯೋ ಬಿಡುಗಡೆ ಮಾಡದಂತೆ ರೇವಣ್ಣ ಕುಟುಂಬ ಮನವಿ ಮಾಡಿಕೊಂಡಿತ್ತು ಎಂದು ತಿಳಿದು ಬಂದಿದೆ. ಸೂರಜ್ ರೇವಣ್ಣ ಸರ್ಕಾರಿ ನಿವಾಸದಲ್ಲಿಯೇ ಡಿಕೆ ಶಿವಕುಮಾರ್ ರನ್ನು ಭೇಟಿಯಾಗಿದ್ದರು. ಅಂದೇ ವಿಡಿಯೋ ಬಗ್ಗೆ ಚರ್ಚೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ.
ಇನ್ನು ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ಯಾಕೆ ಭೇಟಿಯಾಗಿದ್ದರು ಅನ್ನೋದನ್ನು ಸೂರಜ್ ರೇವಣ್ಣ ಅವರನ್ನೇ ಕೇಳಿ ಎಂದು ಮರುಪ್ರಶ್ನೆ ಹಾಕಿದ್ದಾರೆ ಎನ್ನಲಾಗಿದೆ. ಸೂರಜ್ ರೇವಣ್ಣ ಸರ್ಕಾರಿ ನಿವಾಸದಲ್ಲಿಯೇ ಡಿಕೆ ಶಿವಕುಮಾರ್ ರನ್ನು ಭೇಟಿಯಾಗಿದ್ದರು. ಅಂದೇ ವಿಡಿಯೋ ಬಗ್ಗೆ ಚರ್ಚೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಇನ್ನು ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ಯಾಕೆ ಭೇಟಿಯಾಗಿದ್ದರು ಅನ್ನೋದನ್ನು ಸೂರಜ್ ರೇವಣ್ಣರನ್ನೇ ಕೇಳಿ ಎಂದು ಮರುಪ್ರಶ್ನೆ ಹಾಕಿದ್ದಾರೆ.