- +91 73497 60202
- [email protected]
- November 22, 2024 5:38 PM
ನ್ಯೂಸ್ ನಾಟೌಟ್: ವಿಡಿಯೋ ಪ್ರಕರಣದಲ್ಲಿ ಸಿಲುಕಿ ವಿದೇಶಕ್ಕೆ ಪರಾರಿಯಾಗಿದ್ದ ಸಂಸದ ಪ್ರಜ್ವಲ್ ರೇವಣ್ಣ ಇಂದು ರಾತ್ರಿ(ಮೇ.೩೦) ಬೆಂಗಳೂರಿಗೆ ಬರಲಿದ್ದಾರೆ ಎನ್ನಲಾಗಿದ್ದು, ಟಿಕೇಟ್ ಬುಕ್ ಆಗಿ ಆನ್ ಲೈನ್ ನಲ್ಲಿಯೇ ಚೆಕ್ ಇನ್ ಪ್ರೋಸೆಸ್ ಮುಗಿಸಿದ್ದಾರೆ. ಜರ್ಮನಿಯ (Germany) ಮ್ಯೂನಿಕ್‍ನಲ್ಲಿ ಗುರುವಾರ ಮಧ್ಯಾಹ್ನ 3.35ಕ್ಕೆ ಲುಫ್ತಾನ್ಸಾ ಏರ್ ಲೈನ್ಸ್ ವಿಮಾನ ಹತ್ತಲಿದ್ದಾರೆ. ಅಂದಾಜು 8 ಗಂಟೆಗಳ ಪ್ರಯಾಣದ ಬಳಿಕ ಮಧ್ಯರಾತ್ರಿ 12.30ಕ್ಕೆ ಬೆಂಗಳೂರಿಗೆ ಬಂದಿಳಿಯಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಪ್ರಜ್ವಲ್ ಆನ್‍ಲೈನ್ ಚೆಕ್‍ಇನ್ ಪ್ರಕ್ರಿಯೆ ಮುಗಿಸಿದ್ದಾರೆ. ಪ್ರಜ್ವಲ್‍ಗೆ ಬ್ಯುಸಿನೆಸ್ ಕ್ಲಾಸ್‍ನ 3ಕೆ ಸೀಟ್ ಕನ್ಫರ್ಮ್ ಆಗಿದೆ. ಪ್ರಜ್ವಲ್ ರೇವಣ್ಣ ಕೆಐಎಎಲ್‍ಗೆ ಬಂದಿಳಿದ ಕೂಡಲೇ ಅವರನ್ನು ಬಂಧಿಸಲು ಎಸ್‍ಐಟಿ ಸಕಲ ಸಿದ್ದತೆ ಮಾಡಿಕೊಂಡಿದೆ. ಈಗಾಗಲೇ ಏರ್ ಪೋರ್ಟ್‍ನಲ್ಲಿ ಎಸ್‍ಐಟಿ ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ. ಪ್ರಜ್ವಲ್ ವಿರುದ್ಧ ಲುಕ್‍ಔಟ್ ನೊಟೀಸ್ ಜಾರಿಯಲ್ಲಿರುವ ಕಾರಣ, ಏರ್‍ಪೋರ್ಟ್‍ನಲ್ಲಿ ಮೊದಲಿಗೆ ಇಮ್ಮಿಗ್ರೇಷನ್ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆಯಲಿದ್ದಾರೆ. ನಂತ್ರ ಎಸ್‍ಐಟಿಗೆ ಪ್ರಜ್ವಲ್ ರೇವಣ್ಣ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಮೂರು ಪ್ರಕರಣದಲ್ಲಿ ಪ್ರಜ್ವಲ್ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮೊರೆ ಹೋಗಿದ್ದು, ತುರ್ತು ವಿಚಾರಣೆಗೆ ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪದ ಕೋರ್ಟ್, ಆಕ್ಷೇಪಣೆ ಸಲ್ಲಿಸಲು ಎಸ್‍ಐಟಿಗೆ ಸೂಚಿಸಿ ಮೇ 31ಕ್ಕೆ ವಿಚಾರಣೆ ನಿಗದಿ ಮಾಡಿದೆ. Click 👇
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ