ಪೊಲೀಸ್ ಠಾಣೆ ಆವರಣದೊಳಗೆ ಪ್ರಜ್ಞೆ ತಪ್ಪಿ ಮರದಿಂದ ಬಿದ್ದ ಕೋತಿ..! ಪ್ರಥಮ ಚಿಕಿತ್ಸೆ ಮಾಡಿ ಜೀವ ಉಳಿಸಿದ ಪೊಲೀಸ್ ಆಧಿಕಾರಿ, ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಮರದಿಂದ ಪ್ರಜ್ಞೆ ಕಳೆದುಕೊಂಡು ಬಿದ್ದ ಕೋತಿಗೆ ಪೊಲೀಸ್ ಅಧಿಕಾರಿ ಪ್ರಥಮ ಚಿಕಿತ್ಸೆ ಮಾಡಿ ಮರುಜೀವ ನೀಡಿದ ಘಟನೆ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಪೊಲೀಸ್ ಠಾಣೆ ಆವರಣದೊಳಗೆ ಪ್ರಜ್ಞೆತಪ್ಪಿ ಬಿದ್ದಿದ್ದ ಕೋತಿಯನ್ನು ಪೊಲೀಸ್ ಅಧಿಕಾರಿ ಕೂಡಲೇ ಅದಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಿ ಮರುಜೀವ ನೀಡಿದ್ದಾರೆ. ಛಾತಾರಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ವಿಕಾಸ್ ತೋಮರ್ ಕೋತಿಗೆ ಮರುಜೀವ ನೀಡಲು ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (CPR) ಅನ್ನು ನೀಡಿದರು. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮೇ 24 ರಂದು ಈ ಘಟನೆ ನಡೆದಿದ್ದು ವಿಡಿಯೋ ವೈರಲ್ ಆದ ಕಾರಣ ತಡವಾಗಿ ಬೆಳಕಿಗೆ ಬಂದಿದೆ. ಕೋತಿಗೆ ಪ್ರಜ್ಞೆ ಮರಳಿದ ಬಳಿಕ ಪಶುವೈದ್ಯ ಡಾ. ಹರಿ ಓಂ ಶರ್ಮಾ ಅವರು ಅದಕ್ಕೆ ಚಿಕಿತ್ಸೆ ಮುಂದುವರಿಸಿದ್ದಾರೆ ಎಂದು ವರದಿ ತಿಳಿಸಿದೆ. Click 👇