1963ರಲ್ಲಿ ಪೆಟ್ರೋಲ್ ಖರೀದಿಸಿದ ಬಿಲ್ ವೈರಲ್..! 60 ವರ್ಷಗಳ ಹಿಂದೆ ಪೆಟ್ರೋಲ್ ಬೆಲೆ ಎಷ್ಟಿತ್ತು ಗೊತ್ತಾ..?

ನ್ಯೂಸ್ ನಾಟೌಟ್ : ನಮ್ಮ ಕಾಲದಲ್ಲಿ 1 ರೂಪಾಯಿ ಕೊಟ್ಟರೆ ಏನೆಲ್ಲಾ ಬರ್ತಿತ್ತು ಗೊತ್ತಾ? ಆದರೆ, ಈ ಕಾಲದಲ್ಲಿ 100 ರೂಪಾಯಿಗೂ ಬೆಲೆಯಿಲ್ಲ ಎಂದು ಹಿರಿಯರು ಹೇಳುತ್ತಿರುತ್ತಾರೆ. ಆ ಮಾತಿಗೆ ಈಗ ಸಾಕ್ಷಿ ಸಿಕ್ಕಿದೆ. 1963ನೇ ಇಸವಿಗೆ ಸಂಬಂಧಿಸಿದ ಪೆಟ್ರೋಲ್​ ಬಿಲ್ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ದಕ್ಷಿಣ ಕನ್ನಡದಲ್ಲಿ ಸದ್ಯಕ್ಕೆ ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ 99 ರೂಪಾಯಿ ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ 85 ರೂಪಾಯಿಯಲ್ಲಿ ಮಾರಾಟವಾಗುತ್ತಿದೆ. ಇದರ ನಡುವೆ ಸುಮಾರು 50 ವರ್ಷಗಳ ಹಿಂದಿನ ಪೆಟ್ರೋಲ್ ಬಿಲ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಬ್ಬ ವ್ಯಕ್ತಿ ಭಾರತ್ ಪೆಟ್ರೋಲ್ ಬಂಕ್‌ನಿಂದ 5 ಲೀಟರ್ ಪೆಟ್ರೋಲ್ ಖರೀದಿಸಿದ್ದಾನೆ. 3 ರೂಪಾಯಿ 60 ಪೈಸೆ ಬಿಲ್​ ಮಾಡಲಾಗಿದೆ. ಇದು ಒಂದು ಲೀಟರ್ ಪೆಟ್ರೋಲ್ ಬೆಲೆಯಲ್ಲ ಬದಲಾಗಿ ಐದು ಲೀಟರ್ ಪೆಟ್ರೋಲ್​ ಬೆಲೆ. ಅಂದರೆ ಇಂದು ಲೀಟರ್ ಪೆಟ್ರೋಲ್ ದರ ಕೇವಲ 72 ಪೈಸೆ. ಕನಿಷ್ಠ ಒಂದು ರೂಪಾಯಿ ಕೂಡ ಇಲ್ಲ ಎಂಬುದು ಅಚ್ಚರಿಯ ಸಂಗತಿ. ಬಿಲ್​ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ. Click 👇