ನ್ಯೂಸ್ ನಾಟೌಟ್: ಇನ್ಮುಂದೆ ಹೈಕೋರ್ಟ್ನಲ್ಲಿ ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ ಸಿಗಲಿದೆ. ಸಿಕ್ಕಿಂ ಹೈಕೋರ್ಟ್ ಈ ವಿಶೇಷ ನಿರ್ಧಾರವನ್ನು ಪ್ರಕಟಿಸಿದೆ. ಹೈಕೋರ್ಟ್ನ ಮಹಿಳಾ ಉದ್ಯೋಗಿಗಳು ತಿಂಗಳಲ್ಲಿ 2-3 ದಿನ ಮುಟ್ಟಿನ ರಜೆ ಪಡೆಯಬಹುದು ಎಂದು ಕೋರ್ಟ್ ಅನುಮತಿ ನೀಡಿದೆ. ಆದರೆ ಈ ರಜೆಯನ್ನು ಹೈಕೋರ್ಟ್ನ ವೈದ್ಯಾಧಿಕಾರಿಗಳ ಶಿಫಾರಸಿನ ಮೇರೆಗೆ ನೀಡಲಾಗುತ್ತದೆ.
ಇದನ್ನು ಒಟ್ಟಾರೆ ರಜೆ ಜತೆಗೆ ಪರಿಗಣಿಸಲಾಗುವುದಿಲ್ಲ ಎಂದಿದೆ. ಸಿಕ್ಕಿಂ ಹೈಕೋರ್ಟ್ ದೇಶದ ಅತ್ಯಂತ ಚಿಕ್ಕ ಹೈಕೋರ್ಟ್ ಆಗಿದ್ದು ದೊಡ್ಡ ನಿರ್ಧಾರವನ್ನೇ ಕೈಕೊಂಡಿದೆ. ಇದರಲ್ಲಿ ಮೂವರು ನ್ಯಾಯಮೂರ್ತಿಗಳು ಇದ್ದಾರೆ, ಒಬ್ಬರು ಮಹಿಳಾ ಅಧಿಕಾರಿ ಸೇರಿದಂತೆ ಕೇವಲ 9 ಮಂದಿ ಇದ್ದಾರೆ. ಸಿಕ್ಕಿಂ ಹೈಕೋರ್ಟ್ ಮುಟ್ಟಿನ ರಜೆ ನೀತಿಯನ್ನು ಪರಿಚಯಿಸಿದ ಮೊದಲ ಹೈಕೋರ್ಟ್ ಆಗಿದೆ. ಪ್ರಸ್ತುತ, ಮುಟ್ಟಿನ ರಜೆಗೆ ಯಾವುದೇ ರಾಷ್ಟ್ರೀಯ ನೀತಿ ಅಥವಾ ಕಾನೂನು ಇಲ್ಲ ಎನ್ನಲಾಗಿದೆ. ಫೆಬ್ರವರಿ 2023 ರಲ್ಲಿ, ದೇಶದಲ್ಲಿ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆಯನ್ನು ಕೋರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿತು.
Click 👇