ನ್ಯೂಸ್ ನಾಟೌಟ್: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಎನ್ಎಸ್ಎಸ್ ಘಟಕದೊಂದಿಗೆ ಅಗದ ತಂತ್ರ ಹಾಗೂ ಸ್ವಾಸ್ಥ್ಯ ವೃತ್ತ ವಿಭಾಗದ ವತಿಯಿಂದ ಶುಕ್ರವಾರ (ಮೇ 31) ವಿಶ್ವ ತಂಬಾಕು ನಿಷೇಧ ದಿನವನ್ನು ಆಚರಿಸಲಾಯಿತು.
ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ| ಲೀಲಾಧರ್ ಡಿ.ವಿ, “ಧೂಮಪಾನದಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳು ಬೀರುತ್ತವೆ. ಆದುದರಿಂದ ಜನರು ದುಶ್ಚಟಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು. ಡಾ ಕೋಮಲ್ ಕಾಲೆ, ಸ್ನಾತಕೋತ್ತರ ವಿದ್ಯಾರ್ಥಿ, ಆಗದ ತಂತ್ರ ವಿಭಾಗ ಮತ್ತು ದ್ವಿತೀಯ ವರ್ಷದ ಬಿಎಎಂಎಸ್ ವಿದ್ಯಾರ್ಥಿ ಭವಿತ್ ಶಂಕರ್ ಇವರು ವಿಶ್ವ ತಂಬಾಕು ನಿಷೇಧ ದಿನದ ಪ್ರಯುಕ್ತ ವಿಶೇಷ ವಿಷಯ ಮಂಡನೆ ಮೂಲಕ ಜಾಗೃತಿ ಮೂಡಿಸಿದರು.
ಬಳಿಕ ತಂಬಾಕು ರಹಿತ ದಿನದ ಕುರಿತಾಗಿ ವಿದ್ಯಾರ್ಥಿಗಳಾದ ಹರ್ಷಿತಾ ಮತ್ತು ತಂಡದವರಿಂದ ವಿಶೇಷ ಬೀದಿನಾಟಕ ಪ್ರಸ್ತುತ ಪಡಿಸಲಾಯಿತು.
ನೀಲಾ ಎಂ. ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜಿನ ಬೋದಕ, ಬೋಧಕೇತರ ಸಿಬ್ಬಂದಿ, ಎನ್ಎಸ್ಎಸ್ ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಚಿನ್ಮಯಿ ಪ್ರಾರ್ಥಿಸಿ, ಸ್ವಾತಿ ಸ್ವಾಗತಿಸಿದರು. ಸಂಪತ್ ಹಾಗೂ ದೀಕ್ಷಿತಾ ಎಂ.ಎಸ್ ಕಾರ್ಯಕ್ರಮ ನಿರೂಪಿಸಿ ಸ್ನೇಹ ವಂದಿಸಿದರು. ತಂಬಾಕು ರಹಿತ ದಿನದ ಕುರಿತಾಗಿ ವಿಶೇಷ ಬೀದಿನಾಟಕ ಪ್ರಸ್ತುತ ಪಡಿಸಲಾಯಿತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ AOLE(R) ಉಪಾಧ್ಯಕ್ಷೆ ಶೋಭಾ ಚಿದಾನಂದ ಆಗಮಿಸಿದ್ದರು.
Click 👇