NMC Talent Hire 2K24:ಸುಳ್ಯದ ನೆಹರೂ‌ ಮೆಮೋರಿಯಲ್ ಕಾಲೇಜಿನಲ್ಲಿ 2K24 ಉದ್ಯೋಗ ಮೇಳಕ್ಕೆ ಅದ್ದೂರಿ ಚಾಲನೆ, ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಅಕ್ಷಯ್ ಕೆ.ಸಿ

ನ್ಯೂಸ್ ನಾಟೌಟ್: ಸುಳ್ಯದ ನೆಹರೂ‌ ಮೆಮೋರಿಯಲ್ ಕಾಲೇಜಿನಲ್ಲಿ 2K24 ಉದ್ಯೋಗ ಮೇಳಕ್ಕೆ ಮಂಗಳವಾರ (ಮೇ28) ಅದ್ದೂರಿ ಚಾಲನೆ ದೊರೆತಿದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅಕ್ಷಯ್ ಕೆ.ಸಿ ಅವರು, “ಕೆಲಸ ಅರಸುತ್ತಿರುವ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಅವಕಾಶ, ಕೆಲಸ ಸಿಗುತ್ತೊ ಬಿಡುತ್ತೊ ಅದು ವಿಷಯ ಅಲ್ಲ. ಸಂದರ್ಶನಕ್ಕೆ ತೆರಳಿ ಅವಕಾಶವನ್ನು ಕಳೆದುಕೊಳ್ಳಬೇಡಿ” ಎಂದು ತಿಳಿಸಿದರು. ಎಸ್.ಬಿ.ಐ, ಆಕ್ಸಿಸ್ ಬ್ಯಾಂಕ್, ಮಾಂಡೋವಿ, ಹೋಂಡ, ಮಹೀಂದ್ರ ಮತ್ತು ನ್ಯೂಸ್ ನಾಟೌಟ್ ಸೇರಿದಂತೆ ಸುಮಾರು 25 ಕ್ಕೂ ಹೆಚ್ಚು ಸಂಸ್ಥೆಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿವೆ. ಇದೇ ವೇಳೆ ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಡಾ. ರುದ್ರ ಕುಮಾರ್ ಎಂ.ಎಂ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ರತ್ನಾವತಿ. ಡಿ, ನ್ಯಾಕ್ ಸಂಯೋಜಕಿ ಡಾ. ಮಮತಾ ಕೆ, ಕಾಲೇಜಿನ‌ ನಿವೃತ್ತ ಪ್ರಾಂಶುಪಾಲ ಪ್ರೊ ಬಾಲಚಂದ್ರ ಎಂ , IQAC ಸಂಯೋಜಕಿ ಡಾ. ಮಮತಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. Click 👇