ಶಾಲೆಗೆ ಬೀಗ ಜಡಿದ ಸಾಲ ಕೊಟ್ಟ ಬ್ಯಾಂಕ್..! ಅತಿಕ್ರಮಣ ಮಾಡದಂತೆ ಬ್ಯಾಂಕ್ ನಿಂದ ಎಚ್ಚರಿಕೆ ಬರಹ..!

ನ್ಯೂಸ್‌ ನಾಟೌಟ್‌: ಸಾಲ ಮರುಪಾವತಿಗೆ ಸಾಧ್ಯವಾಗದೆ ಖಾಸಗಿ ಶಾಲೆಗೆ ಈ ಆಸ್ತಿಯು ಶ್ರೀ ಎಂ ವಿಶ್ವೇಶ್ವರಯ್ಯ ಸಹಕಾರಿ ಬ್ಯಾಂಕ್‌ನ ಸ್ವಾಧೀನದಲ್ಲಿದೆ. ಅತಿಕ್ರಮಣದಾರರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಸರ್.ಎಂ ವಿಶ್ವೇಶ್ವರಯ್ಯ ಕೋ ಆಪರೇಟಿವ್ ಬ್ಯಾಂಕ್ ನಾಮ ಫಲಕ ಹಾಕಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಕಿರಂಗೂರು ಗ್ರಾಮದ ಖಾಸಗಿ ಶಾಲೆ ಆಡಳಿತ ಮಂಡಳಿಯವರು ಸರ್.ಎಂ ವಿಶ್ವೇಶ್ವರಯ್ಯ ಕೋ ಆಪರೇಟಿವ್ ಬ್ಯಾಂಕ್ ನಿಂದ ಸಾಲ ಪಡೆದಿದೆ. ಆದರೆ, ಸಾಲವನ್ನು ಮರುಪಾವತಿ ಮಾಡದ ಪರಿಣಾಮ ಬ್ಯಾಂಕ್ ಅಧಿಕಾರಿಗಳು ವಿದ್ಯಾಸಂಸ್ಥೆಯನ್ನು ಮುಟ್ಟುಗೋಲು ಹಾಕಿಕೊಂಡು ಅತಿಕ್ರಮಣ ಮಾಡದಂತೆ ಶಾಲಾ ಗೇಟಿಗೆ ನಾಮ ಫಲಕ ಅಳವಡಿಸಿದ್ದಾರೆ ಎಂದು ವರದಿ ತಿಳಿಸಿದೆ. ರಾಜ್ಯಾದ್ಯಂತ ಒಂದೆರಡು ದಿನಗಳಲ್ಲಿ ಶಾಲೆ ಮರು ಆರಂಭಗೊಳ್ಳಲಿದೆ. ಇದೀಗ ವಿದ್ಯಾಸಂಸ್ಥೆ ಗೇಟ್ ಸೀಲ್ ಮಾಡಿ ಬೀಗ ಹಾಕಿರುವುದರಿಂದ ಶಾಲಾ ಆಡಳಿತ ಮಂಡಳಿ ವಿರುದ್ಧ ಪಾಲಕರು ನಮ್ಮ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಹುದು ಎಂದು ಆತಂಕಗೊಂಡಿದ್ದಾರೆ ಎನ್ನಲಾಗಿದೆ. Click 👇