ನ್ಯೂಸ್ ನಾಟೌಟ್: ಕೆಲವು ಸಲ ಕ್ಷುಲ್ಲಕ ಕಾರಣಕ್ಕೆ ಜಗಳವಾಗುತ್ತದೆ. ದುರ್ಘಟನೆಯಲ್ಲಿ ಕೆಲವರ ಪ್ರಾಣವೇ ಹೋಗಿದ್ದಿದೆ. ಇಂತಹ ಘಟನೆಗೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ನೆಲ್ಯಾಡಿ ಕೂಡ ಮೇ26ರಂದು ಸಾಕ್ಷಿಯಾಯಿತು. ನೆಲ್ಯಾಡಿಯ ಕ್ಲಾಸಿಕ್ ಬಾರ್ ನಲ್ಲಿ ಮದ್ಯ ಖರೀದಿಸಲು 61 ವರ್ಷದ ಅಜ್ಜ ಜೋಳಿ ಜೋಸೆಫ್ ಎಂಬುವವರು ಬಂದಿದ್ದಾರೆ. ಈ ವೇಳೆ ಬಾರ್ ಎದುರು ಅಡ್ಡವಾಗಿ ನಿಂತಿದ್ದರು.
ಜೋಸೆಫ್ ಅವರು ಬಾರ್ ಒಳ ಪ್ರವೇಶಿಸುವ ಸಂದರ್ಭದಲ್ಲಿ ಮೂವರಲ್ಲಿ ಓರ್ವನ ಕೈಗೆ ಟೆಚ್ ಆಗಿದೆ. ಇದ್ದಕ್ಕಿದ್ದಂತೆ ಬಿಪಿನ್ ಎಂಬ ವ್ಯಕ್ತಿ ಸಿಟ್ಟಿನಿಂದ ನನ್ನ ಕೈಗೆ ಏಕೆ ಟೆಚ್ ಮಾಡಿದ್ದೀಯಾ..? ಎಂದು ಪ್ರಶ್ನಿಸಿದ್ದಾನೆ. ದೂಡಿ ಹಾಕಿ ಅವಾಚ್ಯ ಶಬ್ಧಗಳಿಂದ ಬೈದಿದ್ದಾನೆ, ಮಾತ್ರವಲ್ಲ ಕೈನಲ್ಲಿದ್ದ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದಿದ್ದಾನೆ. ಜೋಸೆಫ್ ಅವರ ಬೊಬ್ಬೆ ಕೇಳಿ ಬಾರ್ ಸಿಬ್ಬಂದಿ ಹೊರ ಓಡಿ ಬಂದಿದ್ದಾರೆ. ಜನ ಕೂಡ ಸೇರಿದ್ದಾರೆ. ಆರೋಪಿಗಳು ಜೋಸೆಫ್ ಗೆ ಜೀವ ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದಾರೆ. ಇತರೆ ಇಬ್ಬರು ಆರೋಪಿಗಳಾದ ಅಜೇಯ್, ಕುಲದೀಪ್ ವಿರುದ್ಧವೂ ದೂರು ದಾಖಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ, ಅ.ಕ್ರ: 64/2024 ಕಲಂ:504,307,324,506 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಜೋಸೆಫ್ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Click 👇