ನ್ಯೂಸ್ ನಾಟೌಟ್: ದೇಶದಲ್ಲಿ ನರೇಂದ್ರ ಮೋದಿ 3ನೇ ಬಾರಿಗೆ ಮತ್ತೊಮ್ಮೆ ಪ್ರಧಾನಮಂತ್ರಿ ಆಗಲೆಂಬ ಹರಕೆಯನ್ನು ಹೊತ್ತು ಬಾಗಲಕೋಟೆ ಯುವಕನೊಬ್ಬ ಜಿಲ್ಲೆಯ ಇಳಕಲ್ನಿಂದ ಅಯೋಧ್ಯೆವರೆಗೆ ಪಾದಯಾತ್ರೆ ಮಾಡಿದ್ದಾರೆ. ಸುಮಾರು 2 ತಿಂಗಳ ಬಳಿಕ ಅಯೋಧ್ಯೆ ತಲುಪಿ ಮೋದಿ ಪ್ರಧಾನಿಯಾಗುವ ಬಗ್ಗೆ ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಿದ್ದಾನೆ.
ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಹರಕೆ ಹೊತ್ತ ಶ್ರೀ ರಾಮ ಭಕ್ತ ಹರಕೆ ಹೊತ್ತಿದ್ದಾನೆ. ಬಾಗಲಕೋಟೆ ಜಿಲ್ಲೆಯ ಇಲಕಲ್ ಪಟ್ಟಣದ ಮುತ್ತು ಕರಮುಡಿ ಎನ್ನುವ ಯುವಕ ಬಾಗಲಕೋಟೆ ಜಿಲ್ಲೆಯಿಂದ ಅಯೋಧ್ಯೆಗೆ ಕಾಲ್ನಡಿಗೆ ನಡೆಸಿದ್ದಾನೆ. ಕಳೆದ ಎರಡು ತಿಂಗಳ ಹಿಂದೆ ಏ.1ನೇ ತಾರೀಖಿನಂದು ಬಾಗಲಕೋಟೆಯಿಂದ ಕಾಲ್ನಡಿಗೆ ಆರಂಭಿಸಿದ್ದ ಮುತ್ತು ಅಂದಾಜು 2,000 ಕಿ.ಮೀ. ಕಾಲ್ನಡಿಗೆ ನಡೆಸಿದ್ದಾನೆ. ಏಪ್ರಿಲ್ 1ರಂದು ಇಳಕಲ್ ಪಟ್ಟಣದಿಂದ ಆಂಜನೇಯ ದೇವಸ್ಥಾನದಲ್ಲಿ ಕೈ ಮುಗಿದು ಪಾದಯಾತ್ರೆ ಆರಂಭಿಸಿದ್ದಾನೆ ಎನ್ನಲಾಗಿದೆ.
ರಾಮಮಂದಿರ ನಿರ್ಮಾಣದ ಸಂಕಲ್ಪ ಈಡೇರಿಸಿದ ನರೇಂದ್ರ ಮೋದಿ ದೇಶದಲ್ಲಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಹರಕೆ ಹೊತ್ತುಕೊಂಡು ಪಾದಯಾತ್ರೆಗೆ ಆರಂಭಿಸಿದ್ದನು. ಪಾದಯಾತ್ರೆಯನ್ನು ಇಲಕಲ್ ಪಟ್ಟಣದಿಂದ ಆರಂಭಿಸಿ ಬಾಗಲಕೋಟೆ ಮಾರ್ಗವಾಗಿ ಫಂಡರಾಪೂರ, ತುಳಜಾಪೂರ, ನಾಂದೇಡ, ರೇವಾ, ಪ್ರಯಾಗ ರಾಜ್ ಮಾರ್ಗವಾಗಿ ಶ್ರೀರಾಮ ಜನ್ಮಭೂಮಿ ಅಯೋಧ್ಯೆ ನಗರಕ್ಕೆ ತಲುಪಿದ್ದಾನೆ. ಇನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನೂ ಆಗಿರುವ ಮುತ್ತು ಪ್ರತಿನಿತ್ಯ 40 ರಿಂದ 60 ಕಿ.ಮೀ. ಪಾದಯಾತ್ರೆ ಮಾಡಿದ್ದಾನೆ ಎನ್ನಲಾಗಿದೆ. ಇನ್ನು ನಿತ್ಯದ ಆಹಾರಕ್ಕಾಗಿ ಯಾವುದೇ ಸಾಮಾಗ್ರಿಗಳನ್ನು ಕೊಂಡೊಯ್ಯದೇ ದಾರಿಯುದ್ದಕ್ಕೂ ಜನರಿಂದಲೇ ಸ್ವೀಕರಿಸಿದ ಆಹಾರವನ್ನು ಸೇವಿಸುತ್ತಾ ಪಾದಯಾತ್ರೆ ಮುಂದುವರೆಸಿದ್ದಾನೆ.
Click 👇