ನ್ಯೂಸ್ ನಾಟೌಟ್: ಹಿಂದೂ– ಮುಸ್ಲಿಂ ಜೊತೆಯಾಗಿದ್ದರೂ ಈ ಪ್ರದೇಶದಲ್ಲಿ ಒಂದು ಮಸೀದಿಯಿದೆ, ಆದರೆ ದೇವಸ್ಥಾನವಿಲ್ಲ. ತಮಿಳುನಾಡಿನ ಈ ಪ್ರದೇಶದಲ್ಲಿ ಹೆಚ್ಚು ಮುಸ್ಲಿಮರೇ ವಾಸವಾಗಿದ್ದಾರೆ. ತಿರುಪ್ಪೂರ್ ಜಿಲ್ಲೆಯ ಪಡಿಯೂರು ಬಳಿಯ ಒಟ್ಟಪಾಳ್ಯಂ ಪ್ರದೇಶದಲ್ಲಿ ಸುಮಾರು 300 ಕುಟುಂಬಗಳಿವೆ ಎನ್ನಲಾಗಿದೆ. ಕೆಲ ವರ್ಷಗಳ ಹಿಂದೆ ಇಲ್ಲಿ ಕೆಲ ಹಿಂದೂ ಕುಟುಂಬಗಳು ಬಂದು ನೆಲೆಕಂಡಿದೆ.
ಈ ಕುಟುಂಬಗಳ ಮನೆಯಲ್ಲಿ ದೇವರ ಫೋಟೋವಿದೆ ಹೊರತು, ಪೂಜಿಸಲು ದೇವಾಲಯ ಈ ಪ್ರದೇಶದಲ್ಲಿರಲಿಲ್ಲ. ಈ ಕಾರಣದಿಂದ ಹಿಂದೂ ಕುಟುಂಬಗಳು ಜೊತೆಯಾಗಿ ದೇವಸ್ಥಾನವನ್ನು ನಿರ್ಮಿಸಲು ಯೋಜನೆಯೊಂದನ್ನು ಹಾಕಿಕೊಂಡು ಸೂಕ್ತ ಜಾಗವನ್ನು ಹುಡುಕಲು ಪ್ರಾರಂಭಿಸುತ್ತಾರೆ. ಆದರೆ ಹಿಂದೂ ಕುಟುಂಬಗಳಿಗೆ ಗಣೇಶ ದೇವಸ್ಥಾನವನ್ನು ಕಟ್ಟಲು ಸೂಕ್ತವಾದ ಜಾಗ ಸಿಕ್ಕಿರಲಿಲ್ಲ. 20 ವರ್ಷಗಳ ಹಿಂದೆ ಮುಸ್ಲಿಂ ಕುಟುಂಬವೊಂದು ಜಾಗವನ್ನು ಖರೀದಿ ಮಾಡಿತ್ತು. ಆ ಜಾಗದಲ್ಲಿ ಲೇಔಟ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಖಾಲಿಯಾಗಿತ್ತು. 10 ಹಿಂದೂ ನಿವಾಸಿಗಳು ರೋಸ್ ಗಾರ್ಡನ್ ಮುಸ್ಲಿಂ ಜಮಾತ್ ಬಳಿ ತಮಗೆ ಆ ಲೇಔಟ್ ಜಾಗದಲ್ಲಿ ಒಂದು ಭೂಮಿ ದೇವಸ್ಥಾನ ನಿರ್ಮಾಣಕ್ಕೆ ನೀಡಿಯೆಂದು ಮನವಿಯನ್ನು ಮಾಡಿದ್ದಾರೆ.
ಹಿಂದೂಗಳ ಮನವಿಯನ್ನು ಜಮಾತ್ ನಲ್ಲಿ ಒಪ್ಪಿ, ಊರಿನ ಮುಸ್ಲಿಮರು ಗಣೇಶ ದೇವಸ್ಥಾನ ನಿರ್ಮಿಸಲು 6 ಲಕ್ಷ ಮೌಲ್ಯದ 3 ಸೆಂಟ್ಸ್ ಭೂಮಿಯನ್ನು ಹಿಂದೂಗಳಿಗೆ ದಾನವಾಗಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ. ಮೇ.26 ರಂದು ದೇವಸ್ಥಾನದ ಶಂಕು ಸ್ಥಾಪನೆ ನೆರವೇರಿದೆ. ದೇಗುಲದ ಶಂಕು ಸ್ಥಾಪನೆಯ ಅನ್ನ ಪ್ರಸಾದವನ್ನು ಮುಸ್ಲಿಂಮರು ಜೊತೆಯಾಗಿ ಸವಿದಿದ್ದಾರೆ. ಸ್ಥಳೀಯರು ಮತ್ತು ಪಂಚಾಯತ್ ಅಧ್ಯಕ್ಷರು ದೇಣಿಗೆ ಮೂಲಕ 10 ಲಕ್ಷ ರೂ. ನೀಡಿದ್ದಾರೆ. ಕುಂಭಾಭಿಷೇಕ ಸಮಾರಂಭದಲ್ಲಿ ಮುಸ್ಲಿಂ ಬಾಂಧವರು ಅನ್ನದಾನಕ್ಕೆ 30,000 ರೂಪಾಯಿಗಳನ್ನು ನೀಡಿದ್ದಾರೆ ಎನ್ನಲಾಗಿದೆ.
Click 👇