- +91 73497 60202
- [email protected]
- November 25, 2024 12:33 PM
ಪುಟ್ಟ ಮಗಳನ್ನು ಬೆಟ್ಟದ ಮೇಲೆ ಬಿಟ್ಟುಬಂದ ಅಮ್ಮ..! ಹಸಿವಿನಿಂದ 3 ವರ್ಷದ ಮಗುವಿನ ದಾರುಣ ಸಾವು..!
ನ್ಯೂಸ್ ನಾಟೌಟ್ : ಗ್ರಾಮದ ಸರ್‌ಪಂಚ್ ಆಗಿರುವ ಮಹಿಳೆ ತನ್ನ ಗಂಡನ ಜೊತೆ ಗಲಾಟೆ ಮಾಡಿಕೊಂಡಿದ್ದ ಕಾರಣಕ್ಕೆ ತನ್ನ 3 ವರ್ಷದ ಮಗಳನ್ನು ಬೆಟ್ಟದ ಮೇಲೆ ಬಿಟ್ಟ ಕೊಲೆ ಮಾಡಿದ ಘಟನೆ ಛತ್ತೀಸ್‌ಗಢ ರಾಜ್ಯದ ಮುಂಗೇಲಿಯಲ್ಲಿ ವರದಿಯಾಗಿದೆ. ಗಂಡನ ಜೊತೆ ಗಲಾಟೆಯಾದ ಬೆನ್ನಲ್ಲಿಯೇ ತನ್ನ ಮೂರು ವರ್ಷದ ಪುತ್ರಿಯನ್ನು ಬೆಟ್ಟದ ತುದಿಗೆ ಕರೆದೊಯ್ದು ಏಕಾಂಗಿಯಾಗಿ ಬಿಟ್ಟುಬಂದಿದ್ದಾಳೆ. ಕಾಡಿನಲ್ಲಿ ಎಲ್ಲಿ ಹೋಗೋದು ಅನ್ನೋದು ಗೊತ್ತಾಗದೇ, ಹಸಿವು ಹಾಗೂ ಬಾಯಾರಿಕೆಯಿಂದ ಕಂಗಾಲಾಗಿದ್ದ ಮಗು ಅಲ್ಲೆ ಬಿದ್ದು ಸಾವನ್ನಪ್ಪಿದ ಅಮಾನವಿಯ ಘಟನೆ ಬೆಳಕಿಗೆ ಬಂದಿದೆ. ಮೂರು ದಿನಗಳ ಬಳಿಕ ಮಗುವಿನ ಶವ ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭ ಮಾಡಿದ್ದಾರೆ. ಛತ್ತೀಸ್‌ಗಢದ ಮುಂಗೇಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ವಿಷಯವು ಮುಂಗೇಲಿ ಜಿಲ್ಲೆಯ ಲೋರ್ಮಿ ಪೊಲೀಸ್ ಠಾಣೆ ವ್ಯಾಪ್ತಿಯ ಖುಡಿಯಾ ಔಟ್‌ಪೋಸ್ಟ್‌ನಲ್ಲಿರುವ ಪಟ್ಪರ್ಹಾ ಎಂಬ ಅರಣ್ಯ ಗ್ರಾಮಕ್ಕೆ ಸಂಬಂಧಿಸಿದೆ. ಇಲ್ಲಿ ಸರಪಂಚ್ ತಾಯಿಯೇ ತನ್ನ ಮೂರು ವರ್ಷದ ಮಗಳನ್ನು ದಾರುಣವಾಗಿ ಸಾಯಿಸಿದ್ದಾರೆ ಎಂದು ವರದಿ ತಿಳಿಸಿದೆ. ಕಾಡಿಗೆ ಹೋಗುವಾಗ ಸಂಗೀತಾ ತನ್ನ ಒಂದು ವರ್ಷದ ಪುತ್ರ ಹಾಗೂ ಮೂರು ವರ್ಷದ ಮಗಳು ಅನುಷ್ಕಾಳನ್ನು ಕರೆದುಕೊಂಡು ಹೋಗಿದ್ದರು. ಸಂಗೀತಾ, ಗಂಡನ ಮನೆಯಂದ 25 ಕಿಲೋಮೀಟರ್ ದೂರದಲ್ಲಿರುವ ಅಪ್ಪನ ಮನೆಗೆ ಕಾಲ್ನಡಿಗೆಯಲ್ಲಿ ಸಾಗಬೇಕು ಎಂದು ತೀರ್ಮಾನ ಮಾಡಿದ್ದರು. ಅವರ ತಂದೆಯ ಮನೆ ಇರುವ ದಿಂಡೋರಿ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ಜಿಲ್ಲೆಯ ಗಡಿ ಪ್ರದೇಶವಾಗಿದೆ. ಇಬ್ಬರು ಮಕ್ಕಳನ್ನು ಕರೆದುಕೊಂಡು ಹೊರಟ ಸಂಗೀತಾ ಮಗಳು ಅನುಷ್ಕಾಳನ್ನು ಗ್ರಾಮದಿಂದ 5 ಕಿಲೋಮೀಟರ್ ದೂರದಲ್ಲಿದದ ಮೈಲು ಬೆಟ್ಟದ ಮೇಲೆ ಬಿಟ್ಟುಬಂದಿದ್ದಳು. ಇದು ಹುಲಿ ಸಂರಕ್ಷಿತಾರಣ್ಯ ಪ್ರದೇಶವಾಗಿದೆ. ಈ ವಿಚಾರವನ್ನು ಮನೆಯಲ್ಲಿ ಹೇಳಿದ ಬಳಿಕ ಅಕ್ಕಪಕ್ಕದವರು ಅಚ್ಚರಿಗೊಂಡಿದ್ದರು. ತಕ್ಷಣವೇ ಸಂಗೀತಾ ಅವರ ಪತಿಯೊಂದಿಗೆ ಕಾಡಿನಲ್ಲಿ ಅನುಷ್ಕಾಳನ್ನು ಹುಡುಕಲು ಆರಂಭ ಮಾಡಿದ್ದರು. ಬಾಲಕಿಯ ತಾಯಿ ಸಂಗೀತಾ ಬಾಲಕಿಯನ್ನು ಕಾಡಿನ ಯಾವ ಪ್ರದೇಶಲ್ಲಿ ಬಿಟ್ಟು ಹೋಗಿದ್ದಾಳೆಂದು ಎಂದು ತಿಳಿಸಲು ಸಾಧ್ಯವಾಲಿಲ್ಲ. ಗ್ರಾಮಸ್ಥರೊಂದಿಗೆ ಪೊಲೀಸ್ ತಂಡಗಳು ಕೂಡ ಬಾಲಕಿಯ ಹುಡುಕಾಟದಲ್ಲಿ ತೊಡಗಿದ್ದವು. ಅಂತಿಮವಾಗಿ ಮೇ 9ರ ರಾತ್ರಿ ಬಾಲಕಿಯ ಶವ ಮೈಲು ಬೆಟ್ಟದಲ್ಲಿ ಪತ್ತೆಯಾಗಿದೆ Click 👇
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ