ನ್ಯೂಸ್ ನಾಟೌಟ್: ಮದುವೆಯಾಗಲು ಹೆಣ್ಣು ಸಿಗದ ಕಾರಣ ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕೋಡಿಯ ಹುಕ್ಕೇರಿಯಲ್ಲಿ ವರದಿಯಾಗಿದೆ.
ಆತ್ಮಹತ್ಯೆಗೆ ಶರಣಾದ ಯುವಕನನ್ನು ಶಾಂತಿನಾಥ ಸುರೇಶ್ ಕೇಸ್ತಿ (27) ಎಂದು ಗುರುತಿಸಲಾಗಿದೆ. ಯುವಕ ನಗರದಲ್ಲಿ ಬೈಕ್ ಗ್ಯಾರೇಜ್ ನಡೆಸುತ್ತಿದ್ದ ಎನ್ನಲಾಗಿದ್ದು, ಅತಿಯಾದ ಸಾಲ ಹಾಗೂ ಮದುವೆಗೆ ಹೆಣ್ಣು ಸಿಗದೆ ನೊಂದಿದ್ದ. ಇದೇ ಕಾರಣಕ್ಕೆ ಗ್ಯಾರೇಜ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click 👇