ನ್ಯೂಸ್ ನಾಟೌಟ್: ಮಂಡ್ಯದಲ್ಲಿ ನಡೆದಿರುವ ಭ್ರೂಣ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವಿಚಾರಣೆ ವೇಳೆ ನರ್ಸ್ ಸ್ಫೋಟಕ ಸತ್ಯವನ್ನು ಬಾಯಿಬಿಟ್ಟಿದ್ದಾಳೆ. ಆರೋಪಿಗಳು 25-30 ಸಾವಿರ ರೂ.ಗೆ ಕಂದಮ್ಮಗಳ ಉಸಿರು ನಿಲ್ಲಿಸುತ್ತಿದ್ದರು ಎಂದು ಪೊಲೀಸರ ಎದುರು ಹೇಳಿಕೊಂಡಿದ್ದಾಳೆ.
ಯಾವ ಮಗು ಅನ್ನುವುದನ್ನು ಪತ್ತೆ ಹಚ್ಚಿ ಆರೋಪಿಗಳು ಹೇಳುತ್ತಿದ್ದರು. ಹೆಣ್ಣು ಮಗು ಅಂತ ಕಂಡ ಕೂಡಲೇ ಅದನ್ನು ತಿಳಿಸುತ್ತಿದ್ದರು. ಹೆಣ್ಣು ಮಗು ಬಗ್ಗೆ ನಿರಾಸಕ್ತಿಯಿದ್ರೆ ಭ್ರೂಣ ಹತ್ಯೆ ಮಾಡ್ತಿದ್ದರು ಎಂದು ವಿಚಾರಣೆ ವೇಳೆ ಕರಾಳ ದಂಧೆಯ ಬಗ್ಗೆ ಬಂಧಿತ ನರ್ಸ್ ಬಾಯ್ಬಿಟ್ಟಿದ್ದಾರೆ.
ಸ್ಕಾನಿಂಗ್ ಸೆಂಟರ್ಗಳಿಗೆ ಬರುವ ಗರ್ಭಿಣಿಯರನ್ನು ಟಾರ್ಗೆಟ್ ಮಾಡಲಾಗುತ್ತಿತ್ತು. ಎರಡನೇ ಮಗುವಿನ ಸ್ಕ್ಯಾನಿಂಗ್ಗೆ ಬಂದವರಿಗೆ ಈ ರೀತಿಯಾಗಿ ಮಾಡಲಾಗುತ್ತಿತ್ತು. ಹೆಣ್ಣು ಮಗು ಬಗ್ಗೆ ನಿರಾಸಕ್ತಿ ತೋರಿಸಿದ್ರೆ ಭ್ರೂಣ ಲಿಂಗ ಪರೀಕ್ಷೆ ಮಾಹಿತಿ ನೀಡುತ್ತಿದ್ದರು. ಪ್ಲಾನ್ ಮಾಡಿ ತಂತ್ರ ರೂಪಿಸುತ್ತಿದ್ದರು.
ಒಪ್ಪಿಕೊಂಡ್ರೆ ಒಂಟಿ ಮನೆಯಲ್ಲಿ ಸ್ಕ್ಯಾನಿಂಗ್ ನಡೆಸಲಾಗುತ್ತಿತ್ತು. ಹೆಣ್ಣು ಭ್ರೂಣ ಎಂದು ಖಚಿತವಾದ್ರೆ ಪಾಂಡವಪುರಕ್ಕೆ ಗರ್ಭಿಣಿಯನ್ನು ಶಿಫ್ಟ್ ಮಾಡಿ ಬಳಿಕ ಸರ್ಕಾರಿ ಹೆಲ್ತ್ ಕ್ವಾರ್ಟರ್ಸಿನಲ್ಲಿ ಅಬಾರ್ಷನ್ ಮಾಡುತ್ತಿದ್ದರು ಎಂದು ನರ್ಸ್ ಮಾಹಿತಿ ನೀಡಿದ್ದಾಳೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಸದ್ಯ ಇನ್ನಿಬ್ಬರು ಕಿಂಗ್ ಪಿನ್ ಗಳು ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕೇವಲ ಎರಡು ತಿಂಗಳಲ್ಲಿ 15ಕ್ಕೂ ಹೆಚ್ಚು ಭ್ರೂಣ ಹತ್ಯೆ ನಡೆದಿದೆ ಎನ್ನಲಾಗುತ್ತಿದೆ.
ಈ ದಂಧೆಯಲ್ಲಿ ಸ್ಕ್ಯಾನಿಂಗ್ಗೆ 15 ಸಾವಿರ, ಭ್ರೂಣಹತ್ಯೆಗೆ 15ರಿಂದ 20 ಸಾವಿರ ನಿಗದಿ ಮಾಡಲಾಗುತ್ತಿತ್ತು. ದಂಧೆಯಲ್ಲಿ ಕೆಲ ಖಾಸಗಿ ಕ್ಲಿನಿಕ್ಗಳ ನರ್ಸ್ಗಳು ಭಾಗಿಯಾಗಿರುವ ಬಗ್ಗೆಯೂ ಮಾಹಿತಿ ತಿಳಿದಿದೆ. ಈ ಸಂಬಂಧ ಪಾಂಡವಪುರ ಎಸಿಯಿಂದಲೂ ಕೋರ್ಟ್ ಗೆ ದೂರು ದಾಖಲಾಗಿದೆ. ಪಾಂಡವಪುರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.