ಮಮ್ಮುಟ್ಟಿ ಜತೆ ರಾಜ್‌ ಬಿ ಶೆಟ್ಟಿ ನಟಿಸಿರುವ ಟರ್ಬೊ ಟ್ರೇಲರ್‌ ಬಿಡುಗಡೆ, ಪ್ಯಾನ್‌ ಇಂಡಿಯಾ ಚಿತ್ರದಲ್ಲಿ ಕರಾವಳಿ ನಟನ ಕಮಾಲ್

ನ್ಯೂಸ್ ನಾಟೌಟ್: ಸ್ಯಾಂಡಲ್‌ವುಡ್‌ನಲ್ಲಿ ಒಂದು ಮೊಟ್ಟೆಯ ಕಥೆಯ ಬಳಿಕ ಜನಪ್ರಿಯತೆ ಗಳಿಸಿದ ತುಳುನಾಡಿನ ನಟ ರಾಜ್‌ ಬಿ ಶೆಟ್ಟಿ, ಆ ಬಳಿಕ ನಟನೆ, ನಿರ್ದೇಶನ, ಸ್ಕ್ರೀನ್ ಪ್ಲೇ ಮೂಲಕ ಗರುಡ ಗಮನ ವೃಷಭ ವಾಹನ, ಕಾಂತಾರ, ಸ್ವಾತಿ ಮುತ್ತಿನ ಮಳೆಹನಿ ಮುಂತಾದ ಹಿಟ್ ಸಿನಿಮಾಗಳನ್ನು ಕೊಟ್ಟು ಸುದ್ದಿಯಾದರು. ಮಲಯಾಳಂ (ಪ್ಯಾನ್‌ ಇಂಡಿಯಾ) ಸಿನಿಮಾದಲ್ಲಿ ನಟಿಸುತ್ತಿದ್ದು. ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ “ಟರ್ಬೊ” (turbo malayalam movie)ಸಿನಿಮಾ ಇದೀಗ ಬಿಡುಗಡೆ ಹಂತದಲ್ಲಿದೆ. ಟರ್ಬೊ ಸಿನಿಮಾದ ಟ್ರೇಲರ್‌ ಇಂದು(ಮೇ.13) ಬಿಡುಗಡೆಯಾಗಿದ್ದು, ಮುಂದಿನ ವಾರ ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಈ ಟ್ರೇಲರ್‌ನಲ್ಲಿ ರಾಜ್‌ ಬಿ ಶೆಟ್ಟಿಯವರು ಗರುಡ ಗಮನ ವೃಷಭ ವಾಹನದಲ್ಲಿರುವಂತಹ ಒಂದು ದೃಶ್ಯದ ತುಣುಕನ್ನು ತೋರಿಸಲಾಗಿದೆ. ಕನ್ನಡದ ಖ್ಯಾತ ನಟ – ನಿರ್ದೇಶಕ ರಾಜ್ ಬಿ ಶೆಟ್ಟಿಯವರು ಗರುಡ ಗಮನ ವೃಷಭ ವಾಹನದಂತಹ ಮಾಸ್ ಚಿತ್ರ ಮತ್ತು ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬ ಕ್ಲಾಸ್ ಚಿತ್ರಗಳನ್ನು ನೀಡಿದ್ದಾರೆ. ಇದೀಗ ಮಲಯಾಳಂ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ದುಬೈನಲ್ಲಿ ಈ ಚಿತ್ರದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ರಾಜ್‌ ಬಿ ಶೆಟ್ಟಿಯವರು ಭಾಗವಹಿಸಿದ್ದಾರೆ. ಮಲಯಾಳಂ ಭಾಷೆಯಲ್ಲಿ ಪುಲಿಮುರುಗನ್, ಮಧುರೈ ರಾಜದಂತಹ ಬ್ಲಾಕ್‌ಬಸ್ಟರ್‌ ಚಿತ್ರಗಳನ್ನು ನೀಡಿದ ನಿರ್ದೇಶಕರಾದ ವೈಶಾಕ್ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ಚಿತ್ರವನ್ನು ಕನ್ನಡದಲ್ಲಿ ರಾಜ್ ಬಿ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಾದ ‘ ಲೈಟರ್ ಬುದ್ಧ ಫಿಲಂಸ್’ ಹಂಚಿಕೆ ಮಾಡುತ್ತಿದೆ. ಮೇ 23ರಂದು ಚಿತ್ರಮಂದಿರಗಳಲ್ಲಿ ಟರ್ಬೊ ಸಿನಿಮಾ ಬಿಡುಗಡೆಯಾಗಲಿದೆ. Click 👇