ನ್ಯೂಸ್ ನಾಟೌಟ್: ಭಾರತದ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಲಿಮಿಟೆಡ್ ಇತ್ತೀಚೆಗೆ ಬಿಡುಗಡೆ ಮಾಡಿದ ಕಾಂಪ್ಯಾಕ್ಟ್ ಎಸ್ಯುವಿ ಕಾರಾಗಿರುವ ಎಕ್ಸ್ಯುವಿ 3ಎಕ್ಸ್ (Mahindra XUV 3XO) ಕಾರು ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಮೇ 15ರಂದು ಬುಕಿಂಗ್ ಆರಂಭಗೊಂಡ ಕೇವಲ ಒಂದು ಗಂಟೆಯಲ್ಲಿ (60 ನಿಮಿಷ) 50 ಸಾವಿರ ಬುಕಿಂಗ್ ಪಡೆದುಕೊಂಡಿದೆ.
ಎಕ್ಸ್ಯುವಿ 3 ಎಕ್ಸ್ ಒ ದೇಶಾದ್ಯಂತ ಗ್ರಾಹಕರ ಮನ ಗೆದ್ದಿದೆ. ಮೊದಲ 10 ನಿಮಿಷಗಳಲ್ಲಿ 27,000 ಕ್ಕೂ ಹೆಚ್ಚು ಬುಕಿಂಗ್ ಗಳನ್ನು ದಾಖಲಿಸಿದೆ. ಇದು ಮಹೀಂದ್ರಾ ಕಂಪನಿಯು ಹೊಸ ಎಸ್ ಯುವಿ ಕಡೆಗೆ ಹೊಸ ಆಕರ್ಷಣೆಯನ್ನು ಪ್ರದರ್ಶಿಸಿದೆ. ಈ ಮೈಲಿಗಲ್ಲು ಎಕ್ಸ್ ಯುವಿ 3 ಎಕ್ಸ್ ಒನ ಅತ್ಯುತ್ತಮ ವಿನ್ಯಾಸ, ಪ್ರೀಮಿಯಂ ಒಳಾಂಗಣ, ಆರಾಮದಾಯಕ ಸವಾರಿ, ಅತ್ಯಾಧುನಿಕ ತಂತ್ರಜ್ಞಾನ, ರೋಮಾಂಚಕ ಕಾರ್ಯಕ್ಷಮತೆ ಮತ್ತು ಸಾಟಿಯಿಲ್ಲದ ಸುರಕ್ಷತೆಯ ಕಡೆಗೆ ಗ್ರಾಹಕರ ಗಮನವಾಗಿದೆ. ಈ ಕುರಿತು ಮಹೀಂದ್ರಾ ಆ್ಯಂಡ್ ಮಹಿಂದ್ರಾ ಲಿಮಿಟೆಡ್ ನ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವೀಜಯ್ ನಕ್ರಾ ಮಾತನಾಡಿ, ಎಕ್ಸ್ ಯುವಿ 3 ಎಕ್ಸ್ ಒ ಬಿಡುಗಡೆಯಾದ ಸ್ವಲ್ಪ ಸಮಯದಲ್ಲೇ 50,000 ಬುಕಿಂಗ್ ಗಳನ್ನು ಸ್ವೀಕರಿಸಿದೆ ಎಂದು ಘೋಷಿಸಲು ನಾವು ಹೆಮ್ಮೆಪಡುತ್ತೇವೆ.
ಇದು ನಮ್ಮ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಸಾಕ್ಷಿ. ಇಂತಹ ಅಗಾಧ ಮಾರುಕಟ್ಟೆ ಪ್ರತಿಕ್ರಿಯೆಯು ನಾವೀನ್ಯತೆ ಮತ್ತು ನಿರೀಕ್ಷೆಗಳನ್ನು ಮೀರಿ ಮೌಲ್ಯವನ್ನು ತಲುಪಿಸುವ ನಮ್ಮ ಬದ್ಧತೆಗೆ ಪೂರಕ. ಎಕ್ಸ್ ಯುವಿ 3 ಎಕ್ಸ್ ಸಾರಿಗೆ ವ್ಯವಸ್ಥೆಯ ಭವಿಷ್ಯದತ್ತ ಒಂದು ಮಹತ್ವದ ಹೆಜ್ಜೆ. ಇದನ್ನು ಗ್ರಾಹಕರಿಗೆ ಬೇಕಾದ ಹಾಗೆ ಮತ್ತು ಇನ್ನಷ್ಟು ಸೌಲಭ್ಯಗಳನ್ನ ಕೊಡುವುದಕ್ಕೆ ವಿನ್ಯಾಸಗೊಳಿಸಲಾಗಿದೆ ಎಂದಿದ್ದಾರೆ.
Click 👇