ನ್ಯೂಸ್ ನಾಟೌಟ್: ವನ್ಯ ಜೀವಿಗಳ ಮೇಲಿನ ಮನುಷ್ಯನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊಡಗಿನಲ್ಲಿ 549 ಕೆ.ಜಿ ತೂಕದ ಬೃಹತ್ ಕಾಡುಕೋಣವನ್ನು ಮಾಂಸ ಮಾಡಿರುವ ಘಟನೆ ಸೋಮವಾರ (ಮೇ20) ನಡೆದಿದೆ.
ಕೊಡಗು ಜಿಲ್ಲೆ ಮಾದಪುರ ಸಮೀಪದ ನಂದಿಮೊಟ್ಟೆಯಲ್ಲಿ ದುರ್ಘಟನೆ ನಡೆದಿದೆ. ವಿಷಯ ತಿಳಿದ ತಕ್ಷಣ ಮಡಿಕೇರಿ ವಲಯ ಅರಣ್ಯ ಅಧಿಕಾರಿಗಳಿಂದ ಕಾರ್ಯಾಚರಣೆ ನಡೆದಿದೆ. ಖಚಿತ ಮಾಹಿತಿ ಮೇರೆಗೆ ತಡರಾತ್ರಿ ಅಪ್ಪಂಗಳದಲ್ಲಿ ವಾಹನವನ್ನು ಸಿನಿಮೀಯ ಶೈಲಿಯಲ್ಲಿ ಅರಣ್ಯಾಧಿಕಾರಿಗಳು ಬೆನ್ನಟ್ಟಿ ಹಿಡಿದಿದ್ದಾರೆ. ಎಮ್ಮೆಮಾಡು ನಿವಾಸಿ ಹ್ಯಾರಿಸ್(42 ವರ್ಷ) ಎಂಬಾತನನ್ನು ಬಂಧಿಸಲಾಗಿದೆ. ಆದರೆ ಮತ್ತೋರ್ವ ಆರೋಪಿ ಮೂಸಾ ಎಂಬುವವನು ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಬಂಧಿತರಿಂದ ಬಂಧಿತರಿಂದ ಎರಡು ಕತ್ತಿ ಹಾಗೂ ಪಿಕಪ್ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ. 549 ಕೆ.ಜಿ ಕಾಡುಕೋಣ ಮಾಂಸ ವಶಕ್ಕೆ ಪಡೆದುಕೊಳ್ಳಲಾಗಿದೆ.
ಡಿಎಫ್ ಓ, ಭಾಸ್ಕರ್, ಎಸಿಎಫ್ ಮೊಹಿಸಿನ್ ಬಾಷ, ಆರ್.ಎಫ್.ಓ ಪೂಜಾಶ್ರೀ, ಸಿಬ್ಬಂದಿಗಳಾದ, ಮಲ್ಲಯ್ಯ ಹಿರೆಮಠ್,ಸಂತೋಷ್, ವಾಸುದೇವ,ಜೀವನ್, ಯಶವಂತ್,ಕುಶನ್,ಪ್ರವೀಣ್,ಮಹೇಶ, ಸುನಿಲ್,ಮೋಹನ್, ಯತೀಶ್, ದರ್ಶಿನಿ, ಶರತ್,ವೆಂಕಟರಮಣ,ಉಮೇಶ್ ಮತ್ತಿತರರು ಪಾಲ್ಗೊಂಡಿದ್ದರು.