- +91 73497 60202
- [email protected]
- November 21, 2024 11:39 PM
ನ್ಯೂಸ್ ನಾಟೌಟ್: ಉತ್ತರ ಕೊರಿಯಾ ದೇಶದಲ್ಲಿ ಮಹಿಳೆಯರು ಕೆಂಪು ಬಣ್ಣದ ಲಿಪ್‌ಸ್ಟಿಕ್ ಬಳಸುವಂತಿಲ್ಲ. ಬಳಸಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಅಲ್ಲಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ. ಉತ್ತರ ಕೊರಿಯಾ (North Korea) ದಲ್ಲಿ ಉಡುಗೆತೊಡುಗೆ, ಹೇರ್‌ಸ್ಟೈಲ್ ಹೀಗೇ ಪ್ರತಿಯೊಂದರ ಮೇಲೂ ಇಲ್ಲಿ ಕಾನೂನು ಹೇರಲಾಗುತ್ತದೆ. ಉತ್ತರ ಕೊರಿಯಾದ ಸರ್ಕಾರವು ರಾಜ್ಯದ ಮೌಲ್ಯಗಳೊಂದಿಗೆ ಹೊಂದಿಕೊಳ್ಳುವ ಸಂಪ್ರದಾಯವಾದಿ, ಸಾಧಾರಣ ಸೌಂದರ್ಯವನ್ನು ಉತ್ತೇಜಿಸುತ್ತದೆ. ಆದ್ದರಿಂದ ಮಹಿಳೆಯರು ಸರಳತೆ ಮತ್ತು ಏಕರೂಪತೆಗೆ ಹೊಂದಿಕೊಳ್ಳಬಹುದಾದ ಬೇಸಿಕ್ ಮೇಕ್‌ಅಪ್ ಅನ್ನು ಮಾಡಿಕೊಳ್ಳಲು ಇಲ್ಲಿನ ಆಡಳಿತ ಅನುಮತಿಸುತ್ತದೆ ಎನ್ನಲಾಗಿದೆ. ಇನ್ನು ಇಲ್ಲಿನ ನಿಯಮಗಳನ್ನು ಎಲ್ಲರೂ ಅನಸರಿಸಲೇಬೇಕು. ಇಲ್ಲಿನ ಪ್ರಜೆಗಳು ಇದನ್ನು ಅನುಸರಿಸುತ್ತಿದ್ದಾರೆಯೇ ಅಥವಾ ಇಲ್ಲವೋ ಎಂಬುದನ್ನು ಪತ್ತೆಹಚ್ಚಲು ಪೊಲೀಸ್ ಪಡೆಗಳು ಗಸ್ತು ತಿರುಗುತ್ತಿರುತ್ತದೆ ಎನ್ನಲಾಗಿದೆ. ಉತ್ತರ ಕೊರಿಯಾದಲ್ಲಿ ಕೆಂಪು ಲಿಪ್‌ಸ್ಟಿಕ್ ಮೇಲಿನ ನಿಷೇಧವು ಕೇವಲ ಸೌಂದರ್ಯ ನಿಯಂತ್ರಣವಾಗಿರದೇ, ಇದು ದೇಶದ ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಹೋರಾಟಗಳೊಂದಿಗೆ ಆಳವಾಗಿ ಸಂಬಂಧ ಹೊಂದಿದೆ. ವಿಮೋಚನೆ ಮತ್ತು ಸ್ತ್ರೀಲಿಂಗ ಆಕರ್ಷಣೆಯೊಂದಿಗೆ ಹೆಚ್ಚಾಗಿ ಸಂಬಂಧಿಸಿರುವ ಕೆಂಪು ಲಿಪ್‌ಸ್ಟಿಕ್ ಉತ್ತರ ಕೊರಿಯಾದಲ್ಲಿ ಬಂಡವಾಳಶಾಹಿ ಅವನತಿ ಮತ್ತು ನೈತಿಕ ಅವನತಿಯನ್ನು ಪ್ರತಿನಿಧಿಸುತ್ತದೆ ಎಂದು ಅಲ್ಲಿನ ಕಾನೂನಿನಲ್ಲಿ ವಿವರಿಸಲಾಗಿದೆ. ಯಾರೂ ಕೂಡ ಉತ್ತರ ಕೊರಿಯಾದಲ್ಲಿ ಕೆಂಪು ಬಣ್ಣದ ಲಿಪ್‌ಸ್ಟಿಕ್ ಹಾಕುವಂತಿಲ್ಲ. ಮೇಕಪ್ ಕೂಡ ಬೇಕಾಬಿಟ್ಟಿ ಮಾಡುವಂತಿಲ್ಲ. ಇಷ್ಟ ಎಂದು ಡಾರ್ಕ್ ಮೇಕಪ್, ಕಣ್ಣು ಕುಕ್ಕುವಂತಹ ಮೇಕಪ್ ಮಾಡಿಕೊಳ್ಳಲು ಇಲ್ಲಿ ಅವಕಾಶವಿಲ್ಲ. ಸಿಂಪಲ್ ಹಾಗೂ ಲೈಟ್ ಕಲರ್ ಮೇಕಪ್ ಮಾತ್ರ ಮಾಡಬೇಕು. ಐಲೈನರ್, ಐಶ್ಯಾಡೋ ಸೇರಿದಂತೆ ಎಲ್ಲಾ ಮೇಕಪ್ ಸಿಂಪಲ್ ಹಾಗೂ ಲೈಟ್ ಕಲರ್ ಆಗಿರಬೇಕು. ಈ ನಿಯಮಗಳನ್ನು ಧಿಕ್ಕರಿಸುವವರಿಗೆ ಕಠಿಣ ದಂಡವನ್ನು ಸಹ ವಿಧಿಸಲಾಗುತ್ತದೆ. Click 👇
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ