ನ್ಯೂಸ್ ನಾಟೌಟ್: ತಲೆಯ ಕೂದಲು ವ್ಯಕ್ತಿಯ ಸೌಂದರ್ಯದ ಪ್ರತೀಕ. ಒಂದು ಸಲ ಕೂದಲು ಕಳೆದುಕೊಂಡ ನಂತರ ಹಿಂತಿರುಗಿ ಬರೋದಿಲ್ಲ, ನಿಮ್ಮ ಸುಂದರ ಕೂದಲಿನ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕೆ..? ಮೊದಲಿಗಿಂತಲೂ ನೀವು ಸುಂದರವಾಗಿ ಕಾಣಬೇಕೆ..? ಹಾಗಿದ್ದರೆ KVG ಡರ್ಮಾಟಾಲಜಿ ವಿಭಾಗದ ವೈದ್ಯರಾದ ಡಾ| ಮಂಜುನಾಥ್ ಅವರು ಒಂದಷ್ಟು ಟಿಪ್ಸ್ ನೀಡಿದ್ದಾರೆ. ಅದನ್ನು ಫಾಲೋ ಮಾಡಿ,
ಕೂದಲನ್ನು ಹೇಗೆ ಮತ್ತು ಯಾವಾಗ ಸರಿಯಾದ ಕಾಳಜಿ ತೆಗೆದುಕೊಳ್ಳಬೇಕು ಎಂಬುದನ್ನು ಸರಿಯಾಗಿ ತಿಳಿಯಬೇಕು. ಕೂದಲು ಉದ್ದವಿರಲಿ, ತೆಳ್ಳಗಿರಲಿ ಅಥವಾ ದಪ್ಪಗಿರಲಿ ಕೂದಲಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.
- ಕೂದಲಿಗೆ ಅತಿಯಾಗಿ ಎಣ್ಣೆಯನ್ನು ಹಚ್ಚಬಾರದು
- ತಲೆಗೆ ಸ್ನಾನ ಮಾಡುವಾಗ ತುಂಬಾ ಬಿಸಿ ಅಥವಾ ತಣ್ಣನೆಯ ನೀರನ್ನು ಬಳಸಬಾರದು. ಉಗುರು ಬೆಚ್ಚಗಿನ ನೀರನ್ನು ಉಪಯೋಗಿಸಬೇಕು
- ಕೂದಲು ತೊಳೆಯುವುದಕ್ಕೆ ಸೋಪ್ ನ್ನು ಬಳಸಬಾರದು
- ವಾರಕ್ಕೆ ಎರಡು ಅಥವಾ ಮೂರು ಬಾರಿ ಶಾಂಪೂ ಬಳಸು ತಲೆ ಸ್ನಾನ ಮಾಡಬೇಕು
- ತಲೆ ಸ್ನಾನ ಮಾಡುವಾಗ ಕೂದಲನ್ನು ಜೋರಾಗಿ ಉಜ್ಜಬಾರದು
- ಒದ್ದೆಯಾದ ಕೂದಲನ್ನು ಬಾಚಿಕೊಳ್ಳಬಾರದು
- ಕೂದಲನ್ನು ಒಣಗಿಸಲು ಕಾಟನ್ ಟವಲ್ ಅನ್ನು ಬಳಸಬೇಕು
- ಕೂದಲನ್ನು ಒಣಗಿಸಲು ಹೇರ್ ಡ್ರೈಯರ್/ಬ್ಲೋವರ್ ಅನ್ನು ಬಳಸಬಾರದು
- ಅಗಲವಾದ ಹಲ್ಲಿನ ಬಾಚಣಿಗೆಯಲ್ಲಿ ಕೂದಲನ್ನು ನಿದಾನವಾಗಿ ಬಾಚಬೇಕು
- ಡ್ಯಾಂಡ್ರಫ್ ಸಮಸ್ಯೆ ಇದ್ದರೆ ಎಣ್ಣೆಯನ್ನು ಬಳಸಬಾರದು
- ಡ್ಯಾಂಡ್ರಫ್ ಸಮಸ್ಯೆ ಇದ್ದರೆ ಎಣ್ಣೆಯನ್ನು ಬಳಸಬಾರದು
- ಡ್ಯಾಂಡ್ರಫ್ ಇದ್ದರೆ ಅಂಗಡಿಗಳಲ್ಲಿ ಸಿಗುವ ಡ್ಯಾಂಡ್ರಫ್ ಕಂಟ್ರೋಲರ್ ಶಾಂಪೂ ಬಳಸಬೇಕು
- ಕೂದಲನ್ನು ಸ್ಟ್ರೈಟನಿಂಗ್/ಬ್ಲೀಚಿಂಗ್/ಕಲರಿಂಗ್ ಮಾಡಿಸಬಾರದು.
- ಪ್ರೋಟೀನ್ ಗಳಲ್ಲಿ ಸಮೃದ್ಧವಾಗಿರುವ ಆಹಾರಗಳಾದ ಬೇಳೆ ಕಾಳುಗಳು,ಮೊಟ್ಟೆ,ಮಾಂಸ ಹಸಿ ತರಕಾರಿಗಳನ್ನು ಸೇವಿಸಬೇಕು.
- ಕೂದಲು ಅಥವಾ ಚರ್ಮದ ಸಮಸ್ಯೆ ಕಂಡು ಬಂದಲ್ಲಿ ಸ್ಥಳೀಯ ಚರ್ಮರೋಗ ವೈದ್ಯರನ್ನು ಭೇಟಿಯಾಗಬೇಕು