ನ್ಯೂಸ್ ನಾಟೌಟ್: ಶಕ್ತಿ ಯೋಜನೆ ಜಾರಿಯಿಂದ ಸಾರಿಗೆ ಇಲಾಖೆ ಲಾಭದಲ್ಲಿದೆ ಎಂದು ಸಾರಿಗೆ ಸಚಿವರು ಈ ಹಿಂದೆ ಹೇಳಿದ್ದರು. ಈಗ ಶಿವಮೊಗ್ಗದಲ್ಲಿ ನಡೆದ ಘಟನೆ ಸಚಿವರ ಮಾತಿನ ಬಗ್ಗೆ ಅನುಮಾನ ಮೂಡುವಂತೆ ಮಾಡಿವೆ. ಕೆಎಸ್ಆರ್ಟಿಸಿ ಬಸ್ ಡೀಸೆಲ್ ಖಾಲಿಯಾಗಿ ನಡುರಸ್ತೆಯಲ್ಲಿ ನಿಂತ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ ನಲ್ಲಿ ಗುರುವಾರ(ಮೇ.23) ರಂದು ನಡೆದಿದೆ.
ಇದ್ದಕ್ಕಿದ್ದಂತೆ ಬಸ್ ನಡುರಸ್ತೆಯಲ್ಲಿ ನಿಂತು ಪ್ರಯಾಣಿಕರು ಪರದಾಡುವಂತಾಗಿತ್ತು. ಈ ಬಸ್ ಬೆಂಗಳೂರಿನಿಂದ ಕುಂದಾಪುರಕ್ಕೆ ಹೊರಟಿತ್ತು. ಡಿಸೇಲ್ ವ್ಯವಸ್ಥೆ ಮಾಡದ ಸಾರಿಗೆ ನಿಗಮಕ್ಕೆ ಪ್ರಯಾಣಿಕರು ಬೈಯುತ್ತಿದ್ದದ್ದು ನೋಡಿ, ಕಂಡಕ್ಟರ್ ಪ್ರಯಾಣಿಕರು ಮುಂದೆ ಪ್ರಯಾಣಿಸಲು ಟಿಕೆಟ್ ಹಣ ವಾಪಸ್ ನೀಡಲಾಯಿತು. ಬಳಿಕ ಬೇರೊಂದು ಬಸ್ಗಳಿಗೆ ಪ್ರಯಾಣಿಕರು ತೆರಳಿದರು. ‘ಏನು ಮಾಡೋದು ಸಾರ್, ನಮ್ಮ ಹಣದಿಂದಲೇ ಡಿಸೇಲ್ ಹಾಕಿಸಿಕೊಂಡು ಬರಬೇಕೆಂದು ಆದೇಶ ಬಂದಿದೆ’ ಎಂದು ಕಂಡಕ್ಟರ್ , ಡ್ರೈವರ್ ಹೇಳಿಕೊಂಡಿದ್ದಾರೆ.
Click 👇