ನ್ಯೂಸ್ ನಾಟೌಟ್: ಬಹು ದಿನಗಳ ನಂತರ ಕೊಯನಾಡು, ಸಂಪಾಜೆ, ಕಲ್ಲುಗುಂಡಿಯಲ್ಲಿ ಗುಡುಗು, ಮಿಂಚು ಮಿಶ್ರಿತ ಭಾರೀ ಮಳೆ ಸುರಿದಿದೆ.
ಮೊದಲಾಗಿ ಗಾಳಿಯಿಂದ ಆರಂಭವಾದ ಮಳೆಯ ಮುನ್ಸೂಚನೆ ಇದ್ದಕ್ಕಿದಂತೆ ಗುಡುಗು, ಮಿಂಚು ಸಹಿತ ಭೂಮಿಗೆ ಇಳಿಯಿತು. ಹಠಾತ್ ಮಳೆಗೆ ಬೇರೆ -ಬೇರೆ ಕೆಲಸದಲ್ಲಿದ್ದ ಜನರು ತತ್ತರಿಸಿದರು. ಗಾಳಿಯ ಅಲೆ ಸ್ವಲ್ಪ ಹೊತ್ತು ಜನರನ್ನು ಆತಂಕಕ್ಕೆ ದೂಡಿದ್ದಂತೂ ನಿಜ. ಕೊಡಗು ಕೊಯನಾಡಿನಲ್ಲಿ ನಡೆಯುತ್ತಿದ್ದ ಮಲೆಚಾಮುಂಡಿ ದೈವ ಹಾಗೂ ಗುಳಿಗ ದೈವದ ಪ್ರತಿಷ್ಠಾ ಕಾರ್ಯಕ್ರಮದ ಭಜನೆಯ ವೇಳೆ ಮಳೆ ಸುರಿದುದರಿಂದ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಬೇಕಾಗಿ ಬಂತು.