ನ್ಯೂಸ್ ನಾಟೌಟ್: ಖ್ಯಾತ ಕಪಿಲ್ ಶರ್ಮಾ ಟಿವಿ ಶೋ ನಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ನಂಬಿಸಿ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮುಂಬಯಿಯಲ್ಲಿ ವರದಿಯಾಗಿದೆ. ಕೆಲ ದಿನಗಳ ಹಿಂದೆ 26 ವರ್ಷದ ಯುವತಿಗೆ ಆನ್ಲೈನ್ನಲ್ಲಿ ಆನಂದ್ ಎನ್ನುವವನ ಪರಿಚಯವಾಗಿದೆ.
ಟಿವಿ ಉದ್ಯಮದ ಪ್ರಮುಖ ವ್ಯಕ್ತಿಗಳೊಂದಿಗೆ ತನಗೆ ಸಂಪರ್ಕವಿದೆ ಮತ್ತು ಕಪಿಲ್ ಶರ್ಮಾ ಶೋನಲ್ಲಿ ಕೆಲಸ ಕೊಡಿಸುವುದಾಗಿ ಆನಂದ್ ಯುವತಿಯನ್ನು ನಂಬಿಸಿದ್ದ ಎನ್ನಲಾಗಿದೆ. ಇದನ್ನೇ ನಂಬಿದ್ದ ಯುವತಿ ಅಡಿಷನ್ ನೀಡಲು ಬನ್ನಿ ಎಂದು ಹೇಳಿದ್ದ ಆನಂದ್ ಹೇಳಿದ್ದ ವಿಳಾಸಕ್ಕೆ ಹೋಗಿದ್ದಾರೆ. ಅಡಿಷನ್ ಉತ್ತಮವಾದರೆ ಮುಂದೆ ಕಾಸ್ಟಿಂಗ್ ಡೈರೆಕ್ಟರ್ ಬಳಿ ಕರೆದುಕೊಂಡು ಹೋಗುತ್ತೇನೆ ಎಂದಿದ್ದಾನೆ. ಅಡಿಷನ್ ಗೆಂದು ಯುವತಿ ಪಾಲ್ಘರ್ ಜಿಲ್ಲೆಯ ನಲಸೋಪಾರಾ ಪ್ರದೇಶದಲ್ಲಿರುವ ಆನಂದ್ ಮನೆಗೆ ಹೋಗಿದ್ದಾಳೆ.
ಇದೇ ವೇಳೆ ಅಡಿಷನ್ ನೆಪದಲ್ಲಿ ಆನಂದ್ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದಾದ ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆಕೆ ವಿರೋಧಿಸಿದಾಗ ದೈಹಿಕವಾಗಿ ಹಲ್ಲೆ ನಡೆಸಿ ಯಾರಿಗಾದರೂ ಹೇಳಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಸಂತ್ರಸ್ತೆ ಯುವತಿ ದೂರು ನೀಡಿದ್ದಾಳೆ ಮತ್ತು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Click 👇