ಕುರಾನ್ ಅಪವಿತ್ರಗೊಳಿಸಿದನೆಂದು ಕ್ರಿಶ್ಚಿಯನ್ ವ್ಯಕ್ತಿಯ ಶೂ ತಯಾರಿಸುವ ಕಾರ್ಖಾನೆ ಸುಟ್ಟು ಹಾಕಿದ ಜನ..! ತಡೆಯಲು ಬಂದ ಪೊಲೀಸರ ಮೇಲೆ ಕಲ್ಲು ಮತ್ತು ಇಟ್ಟಿಗೆಳಿಂದ ದಾಳಿ..!

ನ್ಯೂಸ್‌ ನಾಟೌಟ್‌: ಕ್ರಿಶ್ಚಿಯನ್ ವ್ಯಕ್ತಿಯೊಬ್ಬರು ಕುರಾನ್ ಅನ್ನು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನದ ಸರಗೋಧದಲ್ಲಿ ಆ ವ್ಯಕ್ತಿಯ ಶೂ ತಯಾರಿಸುವ ಕಾರ್ಖಾನೆಯನ್ನು ನೂರಾರು ಜನ ಮುಸ್ಲಿಮರು ಸುಟ್ಟು ಹಾಕಿರುವ ಘಟನೆ ನಡೆದಿದೆ ನಡೆದಿದೆ. ಸರಗೋಧ ನಗರದ ಮುಜಾಹಿದ್ ಕಾಲೋನಿ ಪ್ರದೇಶದಲ್ಲಿ ಈ ದಾಳಿ ನಡೆದಿದೆ ಎಂದು ವರದಿ ತಿಳಿಸಿದೆ. ಕ್ರಿಶ್ಚಿಯನ್ ವ್ಯಕ್ತಿಯೊಬ್ಬ ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರಾನ್ ಅನ್ನು ಅಪವಿತ್ರಗೊಳಿಸಿದ್ದಾನೆ ಎಂದು ಕೆಲವರು ಆರೋಪಿಸಿದ್ದಾರೆ. ಈ ಗಲಾಟೆಯಲ್ಲಿ ಕ್ರಿಶ್ಚಿಯನ್ ವ್ಯಕ್ತಿಯ ಸಣ್ಣ ಶೂ ತಯಾರಿಸುವ ಕಾರ್ಖಾನೆ ಸುಟ್ಟು ಭಸ್ಮವಾಗಿದೆ. ಗಲಭೆಕೋರರು ತಡೆಯಲು ಬಂದ ಪೊಲೀಸರ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದಿದ್ದಾರೆ ಎನ್ನಲಾಗಿದೆ. ಹಿಂಸಾಚಾರದ ವೇಳೆ ಐವರನ್ನು ಅಧಿಕಾರಿಗಳನ್ನು ರಕ್ಷಿಸಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಸರಗೋಧ ಪೊಲೀಸ್ ಮುಖ್ಯಸ್ಥ ಸಾರಿಕ್ ಖಾನ್ ತಿಳಿಸಿದ್ದಾರೆ.ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎನ್ನಲಾಗಿದೆ. Click 👇