1001 ಬಡಿಗೆಗಳಿಂದ ಪರಸ್ಪರ ಬಡಿದಾಡಿಕೊಳ್ಳುವ ವಿಚಿತ್ರ ಜಾತ್ರೆ..! 3 ವರ್ಷಕ್ಕೊಮ್ಮೆ ನಡೆಯುತ್ತೆ ಜುಮ್ಮಣ್ಣ ಅಜ್ಜನ ಈ ಜಾತ್ರೆ..!

ನ್ಯೂಸ್‌ ನಾಟೌಟ್‌: ಸಾವಿರಾರು ಜನರು ಬಡಿಗೆಯಿಂದ ಹೊಡೆದಾಡಿಕೊಂಡು ಸಣ್ಣ ಪೆಟ್ಟು ಗಾಯ ಸಹಿತ ಆಗೊಲ್ಲ‌ ಅನ್ನೋದು ಜಾತ್ರೆಯಲ್ಲಿನ ಪವಾಡ ಎಂದು ಜನರ ನಂಬಿಕೆ ಹೊಂದಿರುವ ಬಡಿಗೆ ಜಾತ್ರೆ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿಯಲ್ಲಿ ನಡೆಯುತ್ತದೆ. ವಿಜಯಪುರ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ನಡೆಯುವ ಬಡಿಗೆ ಜಾತ್ರೆ ನಡೆಯುತ್ತದೆ. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಗ್ರಾಮಸ್ಥರು ಪರಸ್ಪರ ಬಡಿಗೆಗಳಿಗೆ ಹೊಡೆದಾಡಿಕೊಳ್ತಾರೆ, ವಿಚಿತ್ರ ಅಂದ್ರೆ ಯಾರಿಗೂ ಗಾಯವಾಗೊಲ್ಲ ಅನ್ನೋದು. ಗ್ರಾಮದಲ್ಲಿ ನೆಲೆ‌ನಿಂತಿರುವ ಪವಾಡ ಪುರುಷ ಜುಮ್ಮಣ್ಣ ಅಜ್ಜನ ಜಾತ್ರೆ ಭಕ್ತಿಯಿಂದ ಈ ಜಾತ್ರೆ ನಡೆಯುತ್ತದೆ. ಈ ವೇಳೆ ಗ್ರಾಮದ ಭಕ್ತರು 1001 ಬಡಿಗೆಗಳನ್ನ ರೆಡಿ ಮಾಡಿಕೊಳ್ತಾರೆ. ಈ ಬಡಿಗೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ಪರಸ್ಪರ ಬಡಿದಾಡಿಕೊಳ್ತಾರೆ. ವಿಚಿತ್ರ ಹಾಗೂ ಪವಾಡ ಎಂದರೆ ಪರಸ್ಪರ ಬಡಿಗೆಗಳಿಂದ ಹೊಡೆದಾಡಿಕೊಳ್ಳುವ ಬಡಿಗೆಗಳು ಮುರಿಯುತ್ತವೆ ಇದನ್ನ ಅಜ್ಜನ ಪವಾಡ ಎನ್ನಲಾಗುತ್ತೆ. ಇಲ್ಲಿ ನಡೆಯುವ ಬಡಿಗೆ ಜಾತ್ರೆಯ ಹಿನ್ನೆಲೆ ಬ್ರಿಟಿಷರ ಕಾಲದ್ದು, ಬ್ರಿಟಿಷರ ಆಡಳಿತವಿದ್ದಾಗ ಈ ಗ್ರಾಮದಲ್ಲಿ ಜುಮ್ಮಣ್ಣ ಅಜ್ಜ ಜನರ ಕಷ್ಟ-ಸಂಕಷ್ಟಗಳಿಗೆ ಸ್ಪಂದಿಸುತ್ತ ವ್ಯಕ್ತಿ. ಆದ್ರೆ ಬ್ರಿಟಿಷರು ಊರಲ್ಲಿ ತೆರಿಗೆ ಕೇಳಲು ಬಂದು ಹಾವಳಿ ಇಟ್ಟಿದ್ದರು. ಆಗ ಜುಮ್ಮಣ್ಣ ಅಜ್ಜ ಬ್ರಿಟಿಷ್ ಅಧಿಕಾರಿಗಳು ತೆರಿಗೆ ಕೇಳಲು ಬಂದಾಗ ಜುಮ್ಮಣ್ಣ ಅಜ್ಜ ಬಡಿಗೆಗಳಿಂದ ಹೋರಾಟ ಮಾಡಿ ಅವರನ್ನು ಎದುರಿಸುತ್ತಿದ್ದನಂತೆ. ಹಾಗಾಗಿ ಇಂದಿಗೂ ಅವರ ನೆನಪಿಗಾಗಿ ಬಡಿಗೆಗಳಿಂದ ಆಟವಾಡುತ್ತಾ ಜನರು ಜಾತ್ರೆ ಮಾಡುತ್ತಾರೆ ಎನ್ನಲಾಗಿದೆ.