ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಮೂಲದ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊಗಳು ಇದೀಗ ಹಲವು ವಾಟ್ಸಾಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿವೆ. ‘ನಮ್ಮ ಯುಟ್ಯೂಬ್ ಚಾನೆಲ್ ಗೆ ವಿಡಿಯೊ ಅಪ್ಲೋಡ್ ಮಾಡುತ್ತೇವೆ. ಬೇಗ ಲೈಕ್ / ಸಬ್ಸ್ಕ್ರೈಬ್ ಮಾಡಿ’ ಎಂದು ಕೆಲವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ.
ಹಾಸನದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿಡಿಯೊ ವೈರಲ್ ಆದ ನಂತರ ತೀವ್ರ ಮುಜಗರಕ್ಕೆ ಒಳಗಾಗಿರುವ ಕರ್ನಾಟಕದಲ್ಲಿ ಜ್ಯೋತಿ ರೈ ಅವರದ್ದು ಎನ್ನಲಾದ ವಿಡಿಯೊಗಳು ಇದೀಗ ಚರ್ಚೆಯ ವಿಷಯವಾಗಿವೆ.twitter.com/EDIT_BY_ABHI ಎನ್ನುವ ಟ್ವಿಟರ್ ಖಾತೆಯಲ್ಲಿ ‘Now jyothi rai videos are leaked #PrajwalRevanna #jyothirai’ (ಇದೀಗ ಜ್ಯೋತಿ ರೈ ವಿಡಿಯೊಗಳು ಲೀಕ್ ಆಗಿವೆ) ಎಂದು ಪೋಸ್ಟ್ ಮಾಡಲಾಗಿದೆ. ಇದೇ ಟ್ವಿಟರ್ ಖಾತೆಯಲ್ಲಿಯೇ ಜ್ಯೋತಿ ಅವರು ಸೀರೆ ಉಟ್ಟುಕೊಂಡಿರುವ ಚಿತ್ರದ ಜೊತೆಗೆ ಅವರು ಆಕ್ಷೇಪಾರ್ಹ ಭಂಗಿಯಲ್ಲಿರುವ ಚಿತ್ರವನ್ನೂ ಹಂಚಿಕೊಂಡು ‘ಬೇಗ ಸಬ್ಸ್ಕ್ರೈಬ್ ಮಾಡಿ, ನನ್ನ ಯುಟ್ಯೂಬ್ ಚಾನೆಲ್ಗೆ 1000 ಸಬ್ಸ್ಕ್ರೈಬರ್ಸ್ ಆದ ತಕ್ಷಣ ವಿಡಿಯೊ ಅಪ್ಲೋಡ್ ಮಾಡುತ್ತೇನೆ’ ಎಂದು ಮತ್ತೊಂದು ಪೋಸ್ಟ್ನಲ್ಲಿ ತಿಳಿಸಲಾಗಿದೆ. ವಾಟ್ಸಾಪ್ಗಳಲ್ಲಿಯೂ ಇಂಥದ್ದೇ ಸಂದೇಶಗಳು ಹರಿದಾಡುತ್ತಿವೆ.ಇದೇ ಟ್ವಿಟರ್ ಖಾತೆಗೆ ರಿಪ್ಲೈ ಮಾಡಿರುವ ಹಲವರು, ಬೆಂಗಳೂರು ನಗರ ಪೊಲೀಸರಿಗೆ ‘ದಯವಿಟ್ಟು ಗಮನಕೊಡಿ’ ಎಂದು ಟ್ಯಾಗ್ ಮಾಡಿದ್ದಾರೆ.
ಆದರೆ ಈವರೆಗೆ (ಮೇ 8) ಬೆಂಗಳೂರು ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಕಾಮೆಂಟ್ ಮಾಡಿರುವ ಹಲವರು ವಿಡಿಯೊ ಹಂಚಿಕೊಳ್ಳುವಂತೆ, ಡೈರೆಕ್ಟ್ ಮೆಸೇಜ್ನಲ್ಲಿ ಕಳಿಸುವಂತೆ ಬೇಡಿಕೊಂಡಿರುವುದು ಮಾತ್ರ ಅಸಹ್ಯ ಹುಟ್ಟಿಸುವಂತಿದೆ. ಮಂಜು ನಿಡವಾಣಿ ಎನ್ನುವವರು ವಿಡಿಯೊದ ಲಿಂಕ್ ಇದೆ ಎನ್ನಲಾದ ಸ್ಕ್ರೀನ್ಶಾಟ್ ಅನ್ನೂ ರಿಪ್ಲೈ ಆಗಿ ಹಾಕಿದ್ದಾರೆ.ಇವು ಜ್ಯೋತಿ ರೈ ಅವರದ್ದೇ ಫೋಟೋಗಳಾ? ಅಥವಾ ಮುಖವನ್ನು ಮಾರ್ಫ್ ಮಾಡಿ ಹರಿಬಿಟ್ಟ ವಿಡಿಯೋಗಳಾ ಎಂಬ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಸದ್ಯ ಎಲ್ಲೆಡೆ ಚರ್ಚೆಗೆ ಕಾರಣವಾಗಿರುವ ಈ ವಿಡಿಯೋಗಳ ಬಗ್ಗೆ ನಟಿ ಜ್ಯೋತಿ ರೈ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇನ್ನು ಈ ವಿಡಿಯೋ ಬಗ್ಗೆ ಜ್ಯೋತಿ ರೈ ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಸೈಬರ್ ಕ್ರೈಮ್ಗೆ ಮಾತ್ರ ಈ ವಿಚಾರವಾಗಿ ದೂರು ನೀಡಿದ್ದಾರೆ. ಕೆಲವು ಭಿನ್ನ ವ್ಯಕ್ತಿಗಳು ನನಗೆ ಕಿರುಕುಳ ನೀಡುವ, ಮಾನನಷ್ಟ ಮಾಡುವ ಉದ್ದೇಶದಲ್ಲಿ ಈ ರೀತಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ನನ್ನ ನಂಬರ್ಗೆ ಕೆಲ ಮೆಸೇಜ್ಗಳು ಕೂಡ ಬಂದಿದ್ದವು. ಇಷ್ಟು ಮಾತ್ರವಲ್ಲದೆ, ಈಗ ಅದೇ ವ್ಯಕ್ತಿಗಳು ನನ್ನನ್ನು ನಗ್ನವಾಗಿ ಚಿತ್ರಿಸಿದ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನ ಇನ್ಸ್ಟಾಗ್ರಾಮ್ ಸ್ಟೋರಿ ಇಮೇಜಸ್ ಹಾಗೂ ವೆಬ್ಸಿರೀಸ್ನ ದೃಶ್ಯಗಳನ್ನು ಲೀಕ್ ಮಾಡಿ ಇದನ್ನು ನಕಲಿ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.