ನ್ಯೂಸ್ ನಾಟೌಟ್: ಉದ್ಯೋಗಕ್ಕಾಗಿ ಕಾಂಬೋಡಿಯಾದಲ್ಲಿ (Cambodia) ಮೋಸಕ್ಕೆ ಸಿಲುಕಿದ್ದ 60 ಮಂದಿ ಭಾರತೀಯರನ್ನ ಭಾರತೀಯ ರಾಯಭಾರ ಕಚೇರಿ ರಕ್ಷಣೆ ಮಾಡಿದೆ ಎಮದು ವರದಿ ತಿಳಿಸಿದೆ. 60 ಮಂದಿಯ ಮೊದಲ ಬ್ಯಾಚ್ ಭಾರತಕ್ಕೆ ಮರಳಿದೆ ಎಂದು ರಾಯಭಾರ ಕಚೇರಿ ಮಾಹಿತಿ ನೀಡಿದೆ.
ಕಾಂಬೋಡಿಯಾ ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಸಿಹಾನೌಕ್ವಿಲ್ಲೆನಲ್ಲಿ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಜಿನ್ಬೆ-4 ಎಂಬ ಸ್ಥಳದಲ್ಲಿ ರಕ್ಷಣೆ ಭಾರತೀಯರನ್ನ (Indians Rescued) ಮಾಡಿದ್ದಾರೆ. ಅಲ್ಲದೇ ಇನ್ಮುಂದೆ ಉದ್ಯೋಗಕ್ಕಾಗಿ ಕಾಂಬೋಡಿಯಾಕ್ಕೆ ಬರುವ ಭಾರತೀಯರು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅನುಮೋದಿಸಿದ ಅಧಿಕೃತ ಏಜೆಂಟರ ಮೂಲಕ ಮಾತ್ರವೇ ಉದ್ಯೋಗ ಪಡೆದುಕೊಳ್ಳಬೇಕು ಸೂಚನೆ ನೀಡಲಾಗಿದೆ.
ಇದೇ ವೇಳೆ ಕಾಂಬೋಡಿಯಾದಲ್ಲಿ ಉದ್ಯೋಗ ಹುಡುಕುತ್ತಿರುವ ಭಾರತೀಯರು ಅನಧಿಕೃತ ಏಜೆಂಟ್ಗಳಿಗೆ ಬಲಿಯಾಗದಂತೆ ರಾಯಬಾರಿ ಕಚೇರಿ ಎಚ್ಚರಿಕೆ ನೀಡಿದೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ನಮ್ಮ ಅಧಿಕಾರಿಗಳ ತಂಡ ವಿದೇಶದಲ್ಲಿರುವ ಭಾರತೀಯರಿಗೆ ಯಾವಾಗಲು ಸಹಾಯಕ್ಕೆ ಬದ್ಧವಾಗಿದೆ. ಸದ್ಯ ಮೋಸದ ಉದ್ಯೋಗ ಜಾಲಕ್ಕೆ (Job Scam )ಸಿಲುಕಿದ್ದ 60 ಮಂದಿಯನ್ನ ರಕ್ಷಿಸಿದ್ದೇವೆ. ಅವರಿಂದು ಸ್ವದೇಶಕ್ಕೆ ಮರಳಿದ್ದಾರೆ. ಅದಕ್ಕಾಗಿ ನಮ್ಮ ಇಡೀ ಅಧಿಕಾರಿಗಳ ತಂಡಕ್ಕೆ ಧನ್ಯವಾದ ಸಲ್ಲಿಸುತ್ತೇವೆ ಎಂದು ತಿಳಿಸಿದೆ.
Click 👇