ನ್ಯೂಸ್ ನಾಟೌಟ್: ಇಸ್ಲಾಂ ಧರ್ಮವನ್ನು ಪಾಲಿಸುವವರು ಲಿವ್ – ಇನ್ ಸಂಬಂಧದಲ್ಲಿ ಇರುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಮಾತ್ರವಲ್ಲ ಪತ್ನಿ ಬದುಕಿರುವಾಗ ಬೇರೆ ಮಹಿಳೆಯ ಜೊತೆ ಲಿವ್ – ಇನ್ ಸಂಬಂಧದಲ್ಲಿ ಇರುವಂತಿಲ್ಲ, ಆ ತತ್ವಗಳು ಇಸ್ಲಾಂಗೆ ವಿರುದ್ಧವಾಗಿದೆ ಅನ್ನುವುದನ್ನು ಬಹಳ ಸ್ಪಷ್ಟವಾಗಿ ತಿಳಿಸಿದೆ.
ಸ್ನೇಹಾ ದೇವಿ ಮತ್ತು ಮೊಹಮ್ಮದ್ ಶಾದಾಬ್ ಖಾನ್ ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಆರ್ ಮಸೂದಿ ಮತ್ತು ಎ.ಕೆ ಶ್ರೀ ವಾಸ್ತವ ಲಕ್ನೋ ಪೀಠ ಆದೇಶ ನೀಡಿದೆ. ಸ್ನೇಹಾ ದೇವಿಯ ಪೋಷಕರು ಖಾನ್ ವಿರುದ್ಧ ಅಪಹರಣ ಪ್ರಕರಣವನ್ನು ದಾಖಲಿಸಿದ ನಂತರ ದಂಪತಿ ಪೊಲೀಸ್ ರಕ್ಷಣೆ ಕೋರಿದ್ದರು. ಸ್ನೇಹಾ ದೇವಿ ಅವರನ್ನು ಭದ್ರತೆಯಲ್ಲಿ ಪೋಷಕರ ಬಳಿಗೆ ಕಳುಹಿಸುವಂತೆ ನ್ಯಾಯಾಲಯ ಸೂಚಿಸಿದೆ. ಮಹಿಳೆಯ ಪೋಷಕರು ಅಪಹರಣದ ಆರೋಪವನ್ನು ಹೊರಿಸಿದ್ದರು. ಆದರೆ ಈ ಖಾನ್ ೨೦೨೦ರಲ್ಲಿ ಫರೀದಾ ಅನ್ನೋ ಮಹಿಳೆಯನ್ನು ವಿವಾಹವಾಗಿದ್ದ. ದಂಪತಿಗೆ ಮಗುವಿದೆ. ಆ ಮಹಿಳೆ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಹಿಂದೂ ಯುವತಿ ಜೊತೆಗೆ ಲಿವ್ – ಇನ್ ರಿಲೇಷನ್ ಶಿಪ್ ನಲ್ಲಿ ಇದ್ದ ಎಂದು ತಿಳಿದು ಬಂದಿದೆ.