ನ್ಯೂಸ್ ನಾಟೌಟ್: ಎರಡು ವರ್ಷಗಳ ಹಿಂದೆ ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ನಾಲ್ವರಿಗೆ ಬಿಹಾರದ ಮಧುಬನಿ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಲು ಆದೇಶ ಮಾಡಿದೆ. ಮೊಹಮ್ಮದ್ ಜಾಫರ್ ಅನ್ಸಾರಿ, ಮೊಹಮ್ಮದ್ ಜಿಬ್ರಿಲ್, ಮೊಹಮ್ಮದ್ ಅಹ್ಮದ್ ಮತ್ತು ಅಖ್ತರ್ ಅನ್ಸಾರಿ ಇವರೇ ಶಿಕ್ಷೆಗೆ ಗುರಿಯಾದ ಅಪರಾಧಿಗಳು ಎನ್ನಲಾಗಿದೆ.
ಜೈಲು ಶಿಕ್ಷೆಯ ಜೊತೆಗೆ ನ್ಯಾಯಾಲಯವು ಅಪರಾಧಿಗಳಿಗೆ ತಲಾ 25,000 ರೂ.ಗಳ ದಂಡವನ್ನೂ ವಿಧಿಸಿದೆ ಎಂದು ವರದಿ ತಿಳಿಸಿದೆ. ಮಧುಬನಿಯ ಹರ್ಲಾಖಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2022ರ ಸೆಪ್ಟೆಂಬರ್ 5ರಂದು ಈ ಘಟನೆ ನಡೆದಿತ್ತು. 16 ವರ್ಷದ ಸಂತ್ರಸ್ತೆ ಮೇಲೆ ಎರಗಿದ ಈ ನಾಲ್ವರು ಸಾಮೂಹಿಕ ಅತ್ಯಚಾರ ಎಸಗಿದ್ದರು. ಅಂದು ಸಂತ್ರಸ್ತೆ ತನ್ನ ಸಹೋದರನೊಂದಿಗೆ ಕಸೆರಾ ಗ್ರಾಮದ ಜಾತ್ರೆಗೆ ಹೋಗಿದ್ದಳು.
ಸ್ವಲ್ಪ ಸಮಯದ ನಂತರ ಆಕೆ ಸಮೀಪದ ಶಾಲೆಯೊಂದರ ಶೌಚಾಲಯಕ್ಕೆ ತೆರಳಿದ್ದಳು. ಈ ವೇಳೆ ಮೊಹಮ್ಮದ್ ಜಾಫರ್ ಅನ್ಸಾರಿ, ಮೊಹಮ್ಮದ್ ಜಿಬ್ರಿಲ್, ಮೊಹಮ್ಮದ್ ಅಹ್ಮದ್ ಮತ್ತು ಅಖ್ತರ್ ಅನ್ಸಾರಿ ಕೂಡ ಅಲ್ಲಿಗೆ ಆಗಮಿಸಿದ್ದರು. ಶೌಚಾಲಯದಿಂದ ಹೊರಬಂದ ಆಕೆಯನ್ನು ಬಲವಂತವಾಗಿ ಶಾಲೆಯ ಛಾವಣಿಗೆ ಕರೆದೊಯ್ದರು. ಅಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂದು ಪ್ರಕರಣ ದಾಖಲಾಗಿತ್ತು. ಬಾಲಕಿಯ ಕೂಗು ಕೇಳಿದ ಸ್ಥಳೀಯರು ಜಮಾಯಿಸಲು ಆರಂಭಿಸುತ್ತಿದ್ದಂತೆ ತಾವು ಸಿಕ್ಕಿಬೀಳುತ್ತೇವೆ ಎಂಬ ಭಯದಿಂದ ಈ ಎಲ್ಲ ನಾಲ್ಕು ಅಪರಾಧಿಗಳು ಅಲ್ಲಿಂದ ತಲೆ ಮರೆಸಿಕೊಂಡಿದ್ದರು. ಈಗ ನಾಲ್ವರು ಅಪರಾಧಿಗಳಿಗೆ ಶಿಕ್ಷೆ ಘೋಷಣೆಯಾಗಿದೆ.
Click 👇