ನ್ಯೂಸ್ ನಾಟೌಟ್: ಇನ್ನೊಬ್ಬ ವ್ಯಕ್ತಿಯ ಹೆಂಡತಿಯೊಂದಿಗೆ ಓಡಿಹೋಗಿದ್ದಕ್ಕಾಗಿ ವ್ಯಕ್ತಿಯೊಬ್ಬನಿಗೆ ಶಿಕ್ಷೆಯ ರೂಪದಲ್ಲಿ ಬಲವಂತವಾಗಿ ಮಾನವನ ಮೂತ್ರ ಕುಡಿಯಲು ಹಾಗೂ ಮಾನವ ಮಲವನ್ನು ತಿನ್ನಲು ಬಲವಂತ ಮಾಡಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಬದ್ನೌನ್ನಲ್ಲಿ ನಡೆದಿದೆ. ತನ್ನ ಹೆಂಡತಿ ಜೊತೆ ಓಡಿಹೋದ ಯುವಕನ ಕುತ್ತಿಗೆಗೆ ಚಪ್ಪಲಿ ಹಾಗೂ ಶೂಗಳ ಹಾರ ಹಾಕಿ ಮೆರವಣಿಗೆಯನ್ನೂ ಮಾಡಲಾಗಿದೆ.
ವ್ಯಕ್ತಿ ಈಗಾಗಲೇ ಮದುವೆಯಾಗಿದ್ದ ಮಹಿಳೆಯೊಂದಿಗೆ ಓಡಿಹೋಗಿದ್ದ. ಸಿಕ್ಕಿಬೀಳಬಾರದೆಂದು ಇಬ್ಬರೂ ಹಿಮಾಚಲ ಪ್ರದೇಶಕ್ಕೆ ಪರಾರಿಯಾಗಿದ್ದರು. ಆದರೆ, ಮಹಿಳೆಯ ಪತಿ ಹಿಮಾಚಲದಲ್ಲಿ ವಾಸಿಸುತ್ತಿರುವ ಇಬ್ಬರ ಬಗ್ಗೆ ತಿಳಿದುಕೊಂಡಿದ್ದಲ್ಲದೆ, ಇಬ್ಬರನ್ನೂ ತನ್ನೂರಿಗೆ ಕರೆದುಕೊಂಡು ಬಂದಿದ್ದ. ಮಹಿಳೆಯನ್ನು ಕೂಡಿಹಾಕಲಾಗಿದೆ. ಘಟನೆಯ ಬಗ್ಗೆ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ. ಆದರೆ, ವಿಡಿಯೋ ವೈರಲ್ ಆದ ನಂತರವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Click 👇