ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಗೆ 9,900 ಕೋಟಿ ರೂಪಾಯಿಗಳು ಜಮೆಯಾದ ಘಟನೆ ಉತ್ತರ ಪ್ರದೇಶದ ಭದೋಹಿ ಜಿಲ್ಲೆಯಲ್ಲಿ ನಡೆದಿದೆ.. ಇದನ್ನು ಕಂಡು ಆ ವ್ಯಕ್ತಿಗೆ ನಂಬಲಾಗಲಿಲ್ಲ. ಇದು ಸಾಫ್ಟ್ವೇರ್ ದೋಷದಿಂದ ಆಗಿದೆ ಎಮದು ಬ್ಯಾಂಕ್ ಹೇಳಿಕೊಂಡಿದೆ. ಭಾನು ಪ್ರಕಾಶ್ ಖಾತೆಗೆ ಇಷ್ಟು ದೊಡ್ಡ ಮೊತ್ತ ಬಂದು ಸೇರಿದ್ದು. ಬರೋಡಾ ಯುಪಿ ಬ್ಯಾಂಕ್ಗೆ ಸಂಬಂಧಿಸಿದ ಖಾತೆಯಿಂದ ಎಂದು ವರದಿ ತಿಳಿಸಿದೆ.
ಖಾತೆಯನ್ನು ಭಾನು ಪ್ರಕಾಶ್ ಪರಿಶೀಲಿಸಿದಾಗ, ಅವರು 99,99,94,95,999.99 (ರೂ. 99 ಬಿಲಿಯನ್ 99 ಕೋಟಿ 94 ಲಕ್ಷದ 95 ಸಾವಿರ ಮತ್ತು 999) ತೋರಿಸಿರುವ ಮೊತ್ತವನ್ನು ಕಂಡು ಬೆಚ್ಚಿಬಿದ್ದರು. ನಂತರ ಅವರು ಸಮಸ್ಯೆಯ ಬಗ್ಗೆ ಬ್ಯಾಂಕ್ಗೆ ತಿಳಿಸಿದ್ದಾರೆ ಎನ್ನಲಾಗಿದೆ. ತನಿಖೆಯ ನಂತರ, ಭಾನು ಪ್ರಕಾಶ್ ಖಾತೆಯು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಸಾಲದ ಖಾತೆಯಾಗಿದ್ದು, ದುರದೃಷ್ಟವಶಾತ್ ಇದು ಆಗಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. “ಖಾತೆಯ ಎನ್ಪಿಎ ಸ್ಥಿತಿಗೆ ಲಿಂಕ್ ಮಾಡಲಾದ ಸಾಫ್ಟ್ವೇರ್ ದೋಷದಿಂದಾಗಿ ಭಾನು ಪ್ರಕಾಶ್ ಗೆ ಈ ಮೊತ್ತವು ಕಾಣಸಿಕ್ಕಿದೆ ಎಂದು ನಾವು ಹೇಳೀದ್ದೇವೆ. ತಪ್ಪನ್ನು ಸರಿಪಡಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಯಾವುದೇ ಸಂಭಾವ್ಯ ದುರುಪಯೋಗವನ್ನು ತಡೆಯಲು ಖಾತೆಯನ್ನು ತಡೆಹಿಡಿಯಲಾಗಿದೆ” ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದ್ದಾರೆ.
Click 👇