ಒಬ್ಬನೇ 8 ಬಾರಿ ಮತದಾನ ಮಾಡಿದ್ದೇಗೆ.? ಈತ ಸಿಕ್ಕಿಬಿದ್ದದ್ದೇಗೆ..? ಆತನಿಂದಾಗಿ ಮರುಮತದಾನ..!

ನ್ಯೂಸ್ ನಾಟೌಟ್: ಮೂರನೇ ಹಂತದ ಮತದಾನದಲ್ಲಿ ಯುವಕನೊಬ್ಬ ಒಂದೇ ಬೂತ್‌ನಲ್ಲಿ 8 ಬಾರಿ ಮತ ಚಲಾಯಿಸಿ ಉತ್ತರಪ್ರದೇಶದ ಇಟಾಹ್‌ ನಲ್ಲಿ ಸಿಕ್ಕಿಬಿದ್ದಿದ್ದಾನೆ. ಅಷ್ಟೇ ಅಲ್ಲದೆ ಪ್ರತಿ ಬಾರಿಯೂ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂದು ವರದಿ ತಿಳಿಸಿದೆ. ಉತ್ತರ ಪ್ರದೇಶ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ತಕ್ಷಣ ಕಾರ್ಯಪ್ರವೃತ್ತರಾಗಿ ಯುವಕನನ್ನು ಬಂಧಿಸಿದ್ದಾರೆ. ಚುನಾವಣಾ ತಂಡದ ಎಲ್ಲ ಸದಸ್ಯರನ್ನು ಅಮಾನತುಗೊಳಿಸಲಾಗಿದ್ದು, ಮರು ಮತದಾನಕ್ಕೆ ಶಿಫಾರಸು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇ 7 ರಂದು ಮೂರನೇ ಹಂತದ ಅಡಿಯಲ್ಲಿ ಇಟಾಹ್‌ನಲ್ಲಿ ಮತದಾನ ನಡೆಯಿತು. 2 ನಿಮಿಷ 20 ಸೆಕೆಂಡ್‌ನ ಈ ವಿಡಿಯೋದಲ್ಲಿ ಈ ಯುವಕ ಪ್ರತಿ ಬಾರಿಯೂ ಮತದಾನ ಮಾಡಿದ್ದಾನೆ. ಅವರು ಕಮಲದ ಚಿಹ್ನೆಯ ಮುಂಭಾಗದಲ್ಲಿರುವ ಗುಂಡಿಯನ್ನು ಒತ್ತುವುದನ್ನು ವಿಡಿಯೋದಲ್ಲಿ ಕಂಡಿದೆ. ಈ ವಿಡಿಯೋ ವೈರಲ್ ಆಗಿದ್ದು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಅದರ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.