ನ್ಯೂಸ್ ನಾಟೌಟ್: ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವ ಹೊಸ ನಿಯಮಾವಳಿಗಳನ್ನು ರಾಜ್ಯ ರಸ್ತೆ ಮತ್ತು ಹೆದ್ದಾರಿ ಸಚಿವಾಲಯವು ಇತ್ತೀಚೆಗೆ ಘೋಷಣೆ ಮಾಡಿತ್ತು. ಇವು ಜೂನ್ 1ರಿಂದ ಜಾರಿಗೆ ಬರಲಿವೆ. ಇದರ ಅನ್ವಯ ಸರ್ಕಾರಿ ಆರ್ಟಿಒಗಳ ಬದಲು ಜನರು ಖಾಸಗಿ ಚಾಲನಾ ತರಬೇತಿ ಕೇಂದ್ರಗಳಲ್ಲಿ ಚಾಲನಾ ಪರೀಕ್ಷೆ ನಡೆಸಲು ಅವಕಾಶ ಸಿಗಲಿದೆ.
ಆರ್ಟಿಒದಿಂದ ಅಧಿಕಾರ ಪಡೆದ ಕೇಂದ್ರಗಳು ಮಾತ್ರ ಡ್ರೈವಿಂಗ್ ಟೆಸ್ಟ್ಗಳನ್ನು ನಡೆಸಲು ಮತ್ತು ಚಾಲನಾ ಅರ್ಹತೆಯ ಪ್ರಮಾಣ ಪತ್ರ ನೀಡಬಹುದಾಗಿದೆ. ಹೊಸ ನಿಯಮವು ಅಂದಾಜು 9 ಲಕ್ಷ ಹಳೆ ಸರ್ಕಾರಿ ವಾಹನಗಳನ್ನು ರದ್ದುಗೊಳಿಸಲಿದೆ. ಜತೆಗೆ ಇನ್ನಷ್ಟು ಕಠಿಣ ಕಾರು ಎಮಿಷನ್ ನಿಯಮಾವಳಿಗಳನ್ನು ಹೇರಲಿದೆ. ಅತಿ ವೇಗದ ವಾಹನ ಚಾಲನೆಗೆ ಇರುವ ದಂಡವು 1,000- 2000 ರೂ ಇರಲಿದೆ ಎಂದು ವರದಿ ತಿಳಿಸಿದೆ. ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವಾಗ ಸಿಕ್ಕಿಬಿದ್ದರೆ 25 ಸಾವಿರ ರೂ.ದಷ್ಟು ದೊಡ್ಡ ಮೊತ್ತದ ಹಣ ತೆರಬೇಕಾಗುತ್ತದೆ. ಅಲ್ಲದೆ, ವಾಹನ ಮಾಲೀಕನ ನೋಂದಣಿ ಕಾರ್ಡ್ ಅನ್ನು ರದ್ದುಗೊಳಿಸಲಾಗುತ್ತದೆ. ಹಾಗೆಯೇ ಅಪ್ರಾಪ್ತ ವಯಸ್ಕ 25 ವರ್ಷ ತುಂಬುವವರೆಗೂ ಚಾಲನಾ ಪರವಾನಗಿ ಪಡೆಯಲು ಅನರ್ಹನಾಗುತ್ತಾನೆ ಎನ್ನಲಾಗಿದೆ.
ಆಧಾರ್ ಕಾರ್ಡ್ನಲ್ಲಿನ ವಿವರಗಳನ್ನು ಪರಿಷ್ಕರಿಸಲು ಇರುವ ಗಡುವು ಜೂನ್ ತಿಂಗಳಲ್ಲಿ ಅಂತ್ಯಗೊಳ್ಳಲಿದೆ. ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಬಯಸಿದ್ದರೆ ಜೂನ್ 14ರವರೆಗೂ ಸಮಯವಿದೆ. ಬಳಕೆದಾರರು ಆನ್ಲೈನ್ನಲ್ಲಿಯೇ ತಮ್ಮ ಆಧಾರ್ ಕಾರ್ಡ್ನಲ್ಲಿರುವ ವಿವರಗಳನ್ನು ಸುಲಭವಾಗಿ ಬದಲಿಸಿಕೊಳ್ಳಬಹುದು. ಆದರೆ ಆನ್ಲೈನ್ನಲ್ಲಿ ಅಲ್ಲದೆ, ಆಫ್ಲೈನ್ನಲ್ಲಿ ವಿವರ ಪರಿಷ್ಕರಿಸಲು ಹೋದರೆ, ಪ್ರತಿ ಅಪ್ಡೇಟ್ಗೂ 50 ರೂ ಪಾವತಿಸಬೇಕಾಗುತ್ತದೆ ಎನ್ನಲಾಗಿದೆ.
Click 👇