ನ್ಯೂಸ್ ನಾಟೌಟ್: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಪೆನ್ಡ್ರೈವ್ ಪ್ರಕರಣದಲ್ಲಿ ಷಡ್ಯಂತ್ರ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ವಕೀಲ ದೇವರಾಜೇಗೌಡ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತಾಧಿಕಾರಿಗಳ ಸಭೆಯನ್ನ ಗೌಪ್ಯವಾಗಿ ಕರೆದಿದ್ದಾರೆ. ಪ್ರಜ್ವಲ್ ರೇವಣ್ಣ ಕೇಸಲ್ಲಿ ಯಾರನ್ನ ಆರೋಪಿಗಳಾಗಿ ಮಾಡಬೇಕು, ಬಿಡಬೇಕು ಅಂತ ಚರ್ಚೆಯಾಗಿದೆ. ನನ್ನ ಜೀವನದ ಹೋರಾಟ ಇದ್ದದ್ದು ಎಚ್.ಡಿ ರೇವಣ್ಣ ವಿರುದ್ಧ ಆಗಿತ್ತು. ನನ್ನ ಹೋರಾಟದ ಪ್ರತಿಫಲ ನಿಜವಾದ ನ್ಯಾಯ ಸಿಕ್ಕಿದೆ ಅನ್ಕೊಂಡಿದ್ದೆ. ಇದನ್ನೇ ಅಸ್ತ್ರವಾಗಿ ಇಟ್ಕೊಂಡು ಕೆಲ ಕಿಡಿಗೇಡಿ ರಾಜಕಾರಣಿಗಳು ಅಸ್ತ್ರವಾಗಿ ಇಟ್ಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಎಸ್ ಐಟಿ (SIT) ಮುಖ್ಯಸ್ಥರು ಹಾಗೂ ತನಿಖಾಧಿಕಾರಿಗಳನ್ನ 2 ಬಾರಿ ಭೇಟಿಯಾಗಿದ್ದೀನಿ. ಸಾಕ್ಷಿಯನ್ನಾಗಿ ನನ್ನ ಹೇಳಿಕೆ ಪಡೆದಿದ್ದಾರೆ.
ಕೆಲವು ಕಹಿ ಸತ್ಯ ಹೇಳಬೇಕಿದೆ. ತಡೆಯಾಜ್ಞೆ ಇದ್ರೂ ಸಹ ಅಶ್ಲೀಲ ವೀಡಿಯೋ ಪೆನ್ ಡ್ರೈವ್ ಹಂಚಿರುವ ಬಗ್ಗೆ ಹಾಸನದಲ್ಲಿ ಎಫ್ ಐಆರ್ ಆಗಿದೆ. ಅಶ್ಲೀಲ ವೀಡಿಯೋ ಆಗಿದ್ರೂ ಹೆಣ್ಣು ಮಕ್ಕಳ ಮುಖವನ್ನು ಮರೆ ಮಾಚಿಲ್ಲ ಎಂದು ಹೇಳಿದರು. ಕಾರ್ತಿಕ್ ನನ್ನ ಕಚೇರಿಗೆ ಬಂದು ನನ್ನ ಕೈಗೆ ಈ ಕಾಪಿ ಕೊಡುತ್ತಾನೆ. ಇದರ ಜೊತೆಗೆ ಒಂದು ಪೆನ್ ಡ್ರೈವ್ ಕೊಡ್ತಾನೆ. 88ನೇ ಪ್ರತಿವಾದಿಯಾಗಿ ಇದರಲ್ಲಿ ಕಾರ್ತಿಕ್ ಇದ್ದಾನೆ. ನಾನು ವಿಚಾರಣೆಗೆ ಹೋದಾಗ ನನ್ನ ಹೇಳಿಕೆ ಪಡೆದಿದ್ದಾರೆ, ದಾಖಲೆ ಕೊಟ್ಟಿದ್ದೇನೆ. ನಾನು ಹೇಳಿಕೆಯಲ್ಲಿ ಬಹಳ ಪ್ರಮುಖ ಅಂಶವನ್ನ ಉಲ್ಲೇಖ ಮಾಡಿದ್ದೇನೆ. ಕಾರ್ತಿಕ್ ನನ್ನ ಮನೆಗೆ ಬಂದಿರುವ ವೀಡಿಯೋ ಇದು ಎಂದು ಹೇಳುತ್ತಾ ದೇವರಾಜೇಗೌಡ ತಮ್ಮ ಲ್ಯಾಪ್ ಟಾಪ್ ನಲ್ಲಿ ಕಾರ್ತಿಕ್ ಮನೆಗೆ ಬಂದಿರುವ ವೀಡಿಯೊ ಪ್ರದರ್ಶಿಸಿದರು. ಇದಕ್ಕೆಲ್ಲಾ ಕಾರಣ ಸರ್ಕಾರದ ಮಹಾನ್ ನಾಯಕ ಎಂದು ಕಾರ್ತಿಕ್ ವೀಡಿಯೋದಲ್ಲಿ ಹೇಳಿದ್ದಾನೆ. ಪುಟ್ಟರಾಜು @ ಪುಟ್ಟಿ ಅನ್ನೋರ ಮೂಲಕ ಪೆನ್ ಡ್ರೈವ್ ಬೆಂಗಳೂರಿಗೆ ಬಂತು. ಮುಖ್ಯಮಂತ್ರಿಗಳು ರಹಸ್ಯ ಸ್ಥಳದಲ್ಲಿ ಸೀನಿಯರ್ ಅಧಿಕಾರಿಗಳ ಭೇಟಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದರ ಕಥಾನಾಯಕರೇ ಕಾಂಗ್ರೆಸ್ ಪಕ್ಷ, ಡಿಸಿಎಂ ಡಿಕೆಶಿ, ಸಿಎಂ ಸಿದ್ದರಾಮಯ್ಯ ಹಾಗೂ ಮತ್ತೋರ್ವ ಮಧ್ಯವರ್ತಿ. ದೇವರಾಜೇಗೌಡನನ್ನ ಆರೋಪಿ ಮಾಡ್ಬೇಕು ಕೇಸ್ ಮುಗಿಸಬೇಕು ಅನ್ನೋದು ಅವರ ಅಜೆಂಡಾ. ಈ ಕೇಸ್ ದೊಡ್ಡದು ಮಾಡಿದರೆ ನನಗೆ ಕ್ಯಾಬಿನೆಟ್ ಪೋಸ್ಟ್ ಕೊಡುವ ಆಫರ್ ಮಾಡಿದ್ರು. ಪೆನ್ ಡ್ರೈವ್ ವಿಚಾರವಾಗಿ ಹಾಸನ ಕಾಂಗ್ರೆಸ್ ಅಭ್ಯರ್ಥಿಗೆ ಪೆನ್ಡ್ರೈವ್ ಹೇಗೆಲ್ಲಾ ತಲುಪಿತ್ತು ಎಂದು ಪ್ರಶ್ನಿಸಿದರು. ಆಡಿಯೋ ಬಿಡುಗಡೆ ಮಾಡಿದ ದೇವರಾಜೇಗೌಡ, ಎಲ್ ಆರ್ ಶಿವರಾಮೇಗೌಡ ಮೊದಲು ದೇವರಾಜೇಗೌಡ ಜೊತೆ ಮಾತನಾಡಿ ಆ ಬಳಿಕ ಡಿಕೆಶಿಗೆ ಫೋನ್ ಕೊಟ್ಟರು. ಡಿಕೆ ಸಾಹೇಬ್ರಿಗೆ ಕೊಡ್ತೀನಿ ಏನ್ ನಡೀತು ಅಂತಾ ಹೇಳು. ಡಿಕೆಶಿ ಫೋನ್ ನಲ್ಲಿ ನಮಸ್ಕಾರ ದೇವರಾಜ್ ಎಂದು ಹೇಳುವುದು ಕೇಳಿಸುತ್ತದೆ. ಪಾತ್ರಧಾರಿ ಯಾರು ಅಂತಾ ಗೊತ್ತಾಯ್ತ, ಎಸ್ಐಟಿ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಆರೋಪಿಸಿದ್ದಾರೆ.