ನ್ಯೂಸ್ ನಾಟೌಟ್: ಮದ್ಯ ಸರ್ವ್ ಮಾಡಲು ಬಾರ್ ಸಿಬ್ಬಂದಿ ನಿರಾಕರಿಸಿದರೆಂಬ ಕೋಪಕ್ಕೆ ವ್ಯಕ್ತಿಯೊಬ್ಬ ಅಲ್ಲೇ ಇದ್ದ ಡಿಜೆ(Disc Jockey)ಯನ್ನು ಗುಂಡಿಕ್ಕಿ ಹತ್ಯೆಮಾಡಿದ ಘಟನೆ ಜಾರ್ಖಂಡ್ನ ರಾಂಚಿಯಲ್ಲಿ ನಡೆದಿದೆ.
ಆರೋಪಿ ಹಾಗೂ ಆತನ ನಾಲ್ವರು ಸ್ನೇಹಿತರು ಮಧ್ಯರಾತ್ರಿ ಸುಮಾರು 1 ಗಂಟೆಗೆ ಬಾರ್ಗೆ ಬಂದಿದ್ದರು. ಆ ಸಮಯದಲ್ಲಿ ಬಾರ್ ಮುಚ್ಚಲಾಗಿತ್ತು. ಆದರೂ ಅಲ್ಲಿದ್ದ ಸಿಬ್ಬಂದಿಗೆ ಮದ್ಯ ಸರ್ವ್ ಮಾಡುವಂತೆ ತಾಕೀತು ಮಾಡಿದ್ದಾರೆ. ಇದಕ್ಕೆ ಸಿಬ್ಬಂದಿ ನಿರಾಕರಿಸಿದ್ದು, ಆಗ ಜಗಳ ಶುರುವಾಗಿದೆ. ಬಾರ್ ಸಿಬ್ಬಂದಿ ಮತ್ತು ಯುವಕರ ನಡುವೆ ಮಾರಾಮಾರಿಯೇ ನಡೆದಿತ್ತು. ಈ ನಡುವೆ ಕೋಪದಲ್ಲಿ ತನ್ನ ಕಾರ್ನಲ್ಲಿದ್ದ ರೈಫಲ್ ತೆಗೆದುಕೊಂಡು ಬಂತ ಅಪರಿಚಿತ ಒಬ್ಬ ಡಿಜೆ ಜಾಕಿ ಎದೆಗೆ ಗುಂಡಿಕ್ಕಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಡಿಜೆಯನ್ನು ರಾಜೇಂದ್ರ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಿಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಅಲ್ಲೇ ಕೊನೆಯುಸಿರೆಳೆದಿದ್ದಾನೆ. ಸಿಸಿಟಿವಿ ದೃಶ್ಯ ಎಲ್ಲೆಡೆ ವಯರಲ್ ಆಗಿದೆ.
Click 👇