ನ್ಯೂಸ್ ನಾಟೌಟ್: ಇತ್ತೀಚಿಗೆ ನಟಿಯರ ಭಾವಚಿತ್ರಗಳನ್ನು ಬಳಸಿ ಕೃತಕ ಬುದ್ಧಿಮತ್ತೆ ಮುಖಾಂತರ ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಇದೀಗ ಬೆಂಗಳೂರಿನ ಪ್ರತಿಷ್ಠಿತ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯ ಭಾವಚಿತ್ರಗಳನ್ನು ಕೃತಕ ಬುದ್ಧಿಮತ್ತೆ ಮುಖಾಂತರ ಅಶ್ಲೀಲವಾಗಿ ಎಡಿಟ್ ಮಾಡಿ ಹರಿಬಿಡಲಾಗಿದೆ.
ದುಷ್ಕರ್ಮಿಗಳು ಇತ್ತೀಚಿಗೆ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರ ಭಾವಚಿತ್ರವನ್ನು ಡೀಪ್ ಫೇಕ್ ಮೂಲಕ ಅಶ್ಲೀಲವಾಗಿ ವಿಡಿಯೋ ಎಡಿಟ್ ಮಾಡಿದ್ದರು. ಈ ಪ್ರಕರಣ ನಂತರ ಇದೇ ರೀತಿ ನಟಿ ಕತ್ರಿನಾ ಕೈಫ್ ಅವರ ಭಾವಚಿತ್ರ ಉಪಯೋಗಿಸಿ ಅಶ್ಲೀಲವಾಗಿ ಎಡಿಟ್ ಮಾಡಲಾಗಿತ್ತು. 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇನ್ಸ್ಟಾಗ್ರಾಮನಲ್ಲಿ ಗ್ರೂಪ್ ರಚಿಸಿಕೊಂಡಿದ್ದಾರೆ. ಬಳಿಕ ಈ ಗ್ರೂಪ್ನಲ್ಲಿ ಅನಾಮದೆಯ ವ್ಯಕ್ತಿ ವಿದ್ಯಾರ್ಥಿನಿಯರ ಮಾರ್ಫಿಂಗ್ ಭಾವಚಿತ್ರಗಳನ್ನು ಶೇರ್ ಮಾಡಿದ್ದಾನೆ. ಈ ವಿಚಾರ ತಿಳಿದು ವಿದ್ಯಾರ್ಥಿನಿಯರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಪೋಷಕರು ಈಗಾಗಲೇ ಸೈಬರ್ ಸೆಲ್ಗೆ ದೂರು ನೀಡಿದ್ದಾರೆ.ಮೇ 24 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
Click 👇