Viral video: ಚಲಿಸುವ ಟ್ರಕ್‌ ನಿಂದ ಸಿನಿಮೀಯ ರೀತಿಯಲ್ಲಿ ಕಳ್ಳತನ..! ಕಳ್ಳರ ಹುಚ್ಚು ಸಾಹಸದ ವೈರಲ್ ವಿಡಿಯೋ ಇಲ್ಲಿದೆ..!

ನ್ಯೂಸ್‌ ನಾಟೌಟ್‌: ಬೈಕ್ ನಲ್ಲಿ ಬಂದ ಮೂವರ ಗ್ಯಾಂಗ್ ಸಿನಿಮೀಯ ರೀತಿಯಲ್ಲಿ ಚಲಿಸುವ ಟ್ರಕ್‌ನಿಂದ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಸರಕು ಕಳ್ಳತನದ ವಿಡಿಯೋ ವೈರಲ್ ಅಗುತ್ತಿದ್ದು, ಈ ಹುಚ್ಚು ಸಾಹಸಕ್ಕೆ ಹಲವರು “ದೂಮ್” ಸಿನಿಮಾದ ದೃಶ್ಯಕ್ಕೆ ಹೋಲಿಸಿದ್ದಾರೆ. ನಿಜ ಜೀವನದಲ್ಲಿ ಈ ಲಾರಿ ಕಳ್ಳತನ ವಿಡಿಯೋ ನೋಡಿದರೆ ರೋಮಾಂಚನವಾಗುತ್ತದೆ. ಇದು ಸಿನಿಮಾ ಶೂಟಿಂಗ್ ದೃಶ್ಯದಂತಿದೆ ಈ ಘಟನೆ. ಹೆದ್ದಾರಿಯೊಂದರಲ್ಲಿ ಸರಕು ಹೊತ್ತ ಲಾರಿಯೊಂದು ಒಂದೇ ವೇಗದಲ್ಲಿ ಚಲಿಸುತ್ತಿರುತ್ತದೆ. ಹಿಂದಿನಿಂದ ಮೂವರ ಗ್ಯಾಂಗ್ ಒಂದೇ ಬೈಕ್‌ನಲ್ಲಿ ಲಾರಿಯನ್ನು ಹಿಂಚಾಲಿಸುತ್ತದೆ. ಅದರಲ್ಲಿ ಇಬ್ಬರು ಚಲಿಸುತ್ತಿದ್ದ ಲಾರಿ ಏರಿ, ಅದರಲ್ಲಿ ಸರಕಿನ ಚೀಲವನ್ನು ರಸ್ತೆಗೆ ಎಸೆಯುತ್ತಾರೆ. View this post on Instagram A post shared by _memes_reels_ (@mem3s.club) ಬಳಿಕ ಅದೇ ಲಾರಿಯಿಂದ ಒಬ್ಬೊಬ್ಬರಾಗಿ ಇಳಿಯುತ್ತಾ ಹಿಂದೆ ಬರುತ್ತಿದ್ದ ಸಹಚರನ ಬೈಕಿನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುತ್ತಾರೆ. ಇದು ಹಿಂದಿನಿಂದ ಬರುತ್ತಿದ್ದ ಕಾರ್ ನಲ್ಲಿದ್ದವರು ಸೆರೆ ಹಿಡಿದಿದ್ದಾರೆ. Click 👇