- +91 73497 60202
- [email protected]
- November 22, 2024 5:08 AM
ನ್ಯೂಸ್ ನಾಟೌಟ್ : ಮೊಹಮ್ಮದಿ ಮದೀನಾ ಮಸೀದಿ ಮೌಲ್ವಿ ಮೊಹಮ್ಮದ್ ತಾಹಿರ್ನನ್ನು ವಿದ್ಯಾರ್ಥಿಗಳು ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಅಜ್ಮೀರದಲ್ಲಿ ನಡೆದಿದೆ. ಮೌಲ್ವಿ ಕಳೆದ 4 ವರ್ಷಗಳಿಂದ ತಮ್ಮ ಮೇಲೆ ನಿರಂತರ ಅತ್ಯಾಚಾರವೆಸಗುತ್ತಿದ್ದರು ಹೀಗಾಗಿ ನಾವೇ ಅವರನ್ನು ಕೊಲೆ ಮಾಡಿದ್ದೇವೆ ಎಂದು ವಿದ್ಯಾರ್ಥಿಗಳು ಪೊಲೀಸರ ಒಪ್ಪಿಕೊಂಡಿದ್ದಾರೆ. ರಾಜಸ್ಥಾನದ ಅಜ್ಮೀರ್‌ನಲ್ಲಿ ಮೌಲಾನಾ ಹತ್ಯೆ ಆರೋಪದ ಮೇಲೆ ಆರು ಅಪ್ರಾಪ್ತ ಬಾಲಕರನ್ನು ಬಂಧಿಸಲಾಗಿದೆ.ಮೌಲಾನಾ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಮೌಲಾನಾ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅತ್ಯಾಚಾರವೆಸಗುತ್ತಿದ್ದರು ಎಂದು ಆರೋಪಿಸಲಾಗಿದೆ, ಇದರಿಂದ ಬೇಸರಗೊಂಡ ಮಕ್ಕಳು ಆತನನ್ನು ಕೊಲ್ಲುವ ಪ್ಲಾನ್ ಮಾಡಿದ್ದಾರೆ. ಈ ಘಟನೆ ಏಪ್ರಿಲ್ 26 ರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೂವತ್ತು ವರ್ಷದ ಮೌಲಾನಾ ಮೊಹಮ್ಮದ್ ತಾಹಿರ್ ಎಂಬಾತನನ್ನು ವಿದ್ಯಾರ್ಥಿಗಳು ಹೊಡೆದು ಕೊಂದಿದ್ದಾರೆ. ಮೌಲಾನಾ ಮೊಬೈಲ್ ನಲ್ಲಿ ಮಕ್ಕಳಿಗೆ ಅಶ್ಲೀಲ ಚಿತ್ರಗಳನ್ನು ತೋರಿಸಿ ಬಳಿಕ ಅತ್ಯಾಚಾರ ಎಸಗುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಇದನ್ನೇ ಮಾಡುತ್ತಿದ್ದರು. ಇದರಿಂದ ಮನನೊಂದ ಮಕ್ಕಳು ರಾಯತಾದಲ್ಲಿ ನಿದ್ರೆ ಮಾತ್ರೆ ಬೆರೆಸಿ ಮೌಲಾನಾಗೆ ನೀಡಿದ್ದಾರೆ. ಮಲಗಿದ್ದ ಆತನ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾರೆ, ಬಳಿಕ ಹಗ್ಗದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಅಜ್ಮೀರ್‌ನ ಕಾಂಚನ್ ನಗರದಲ್ಲಿರುವ ಮೊಹಮ್ಮದಿ ಮದೀನಾ ಮಸೀದಿಗೆ ಸೇರಿದವರು. ಮೌಲಾನಾ ತಮ್ಮನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎಂದು ಮಕ್ಕಳು ಹೇಳಿದ್ದು, ಕೊಲೆ ಮಾಡಿದ್ದನ್ನು ಒಪ್ಪಿಕೊಂಡರು. ಇದೀಗ ಈ ಸಂಬಂಧ 6 ಅಪ್ರಾಪ್ತ ಬಾಲಕರನ್ನು ಬಂಧಿಸಲಾಗಿದೆ. ಲೈಂಗಿಕ ದೌರ್ಜನ್ಯದ ಬಗ್ಗೆ ಯಾರಿಗಾದರೂ ಹೇಳಲು ಪ್ರಯತ್ನಿಸಿದರೆ, ಮೌಲ್ವಿ ತಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಮಕ್ಕಳು ಹೇಳಿದ್ದಾರೆ. ಮೌಲಾನಾ ಜೊತೆ 15 ಮಕ್ಕಳು ವಾಸಿಸುತ್ತಿದ್ದರು ಎನ್ನಲಾಗಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ